b4b62f9d-4e83-4364-9ba7-c270f97a26e8

ಸಂಭ್ರಮದ ರಘುವೀರತೀರ್ಥರ ಆರಾಧನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೫-  ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಘುವೀರತೀರ್ಥರ ಆರಾಧನಾ ಮಹೋತ್ಸವ  ತುಳಸಿ ಅರ್ಚನೆ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು.

ಶುಕ್ರವಾರದಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, 5.30ಕ್ಕೆ ಲಕ್ಷ ತುಳಸಿ ಅರ್ಚನೆ, ವಿಷ್ಣುಸಹಸ್ರನಾಮ ಪಾರಾಯಣ, 6.30ಕ್ಕೆ ಮಹಿಳೆಯರಿಂದ ಶ್ರೀನಿವಾಸ ಕಲ್ಯಾಣ ಪಾರಾಯಣ, ಗ್ರಾಮ ಪ್ರದಕ್ಷಣೆ, 9 ಗಂಟೆಗೆ ನೈವೇದ್ಯ, ಹಸ್ತಫದಕ, ಅಲಂಕಾರ ಜರುಗಿತು.

ಸಂಜೆ 6 ಗಂಟೆಗೆ ಪಂಡಿತ್‌ ಅಂಬರೀಷಾಚಾರ್‌ ಬೆಂಗಳೂರು ಅವರಿಂದ ಪ್ರವಚನ, ರಾ. 7.30ಕ್ಕೆ ರಾಯಚೂರಿನ ವರನೇಂದ್ರ ಗಂಗಾಖೇಡ್ಕರ್‌ ಅವರಿಂದ ಭಕ್ತಿ ಸಂಗೀತ ಮತ್ತು 9 ಗಂಟೆಗೆ ದೀಪೋತ್ಸವ ನಂತರ ಫಲಮಂತ್ರಾಕ್ಷತೆ ಜರುಗಿತು.

Leave a Reply

Your email address will not be published. Required fields are marked *

error: Content is protected !!