FB_IMG_1702693695672

ಹಾಲವರ್ತಿ ಶ್ರೀ ಗಂಧದ ಮರ ಕಳ್ಳತನ 

ಮೂರು ತಿಂಗಳ ನಂತರ ದೂರು ದಾಖಲು

ಕರುನಾಡ ಬೆಳಗು ಸುದ್ದಿ

ಕೊಪ್ಪಳ,15- ಸಮಿಪದ ಹಾಲವರ್ತಿ ಗ್ರಾಮದ ಜಡಿಸ್ವಾಮಿ ಎಂಬುವರು ತಮ್ಮ ಜಮೀನಿನಲ್ಲಿ ಅಗಸ್ಟ್ ನಲ್ಲಿ ಕಳ್ಳತನ ವಾಗಿದ್ದ  ಶ್ರೀ ಗಂಧದ ಮರಗಳ ಕುರಿತು ಡಿ14 ಗುರುವಾರ ಎಫ್‌ಐಆರ್‌ ದಾಖಲಾಗಿದೆ.

ತನ್ನ ತೋಟದಲ್ಲಿ ಬೆಳೆದ ಶ್ರೀಗಂಧದ ಮರಗಳು ಕಳ್ಳತನವಾಗಿವೆ ಎಂದು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದ ಆದರೆ ಠಾಣೆಯಲ್ಲು ದೂರು ದಾಖಲಾಗಿರಲಿಲ್ಲಾ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ತರಬೇತಿ) ಅಲೋಕ್‌ ಕುಮಾರ್‌ ಅವರ ಗಮನಕ್ಕೂ ತಂದ ಬಳಿಕ ಎಫ್‌ಐಆರ್‌ ದಾಖಲಾಗಿದೆ ಎಂದು ರೈತ ಪತ್ರಕೆಗೆ ತಿಳಿಸಿದ್ದಾರೆ.
ಘಟನೆ ವಿವರ ; ಹಾಲವರ್ತಿ ವ್ಯಾಪ್ತಿಯಲ್ಲಿರುವ ಐದು ಎಕರೆ ಜಮೀನಿನ ಪೈಕಿ 1 ಎಕರೆ 16 ಗಂಟೆ ಜಮೀನಿನಲ್ಲಿ 230 ಗಂಧದ ಸಸಿಗಳನ್ನು ಹಾಕಿದ್ದಾರೆ. ಅದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಮರಗಳನ್ನು ಯಾರೊ ಕತ್ತರಿಸಿಕೊಂಡು ಹೋಗಿದ್ದಾರೆ .ಆಗಸ್ಟ್‌ 18ರಿಂದ 19ರ ಅವಧಿಯಲ್ಲಿ ನಡೆದಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು ಇಗ ದೂರು ದಾಖಲಿಸಿದ್ದಾರೆ ಎನ್ನಲಾಗುದೆ.

ಪರದಾಟ ; ರೈತ ಜಡಿಸ್ವಾಮಿ ಹಲವಾರು ಭಾರಿ ಠಾಣೆಗೆ ಬಂದು ದೂರು ನೀಡಲು‌ಪ್ರಯತ್ನಿಸಿದರು ದೂರು ದಾಖಲಾಗಿರಲಿಲ್ಲಾ ಘಟನೆ ನಡೆದ ಮೂರು ತಿಂಗಳಾದರೂ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಕೊಪ್ಪಳಕ್ಕೆ ಎಡಿಜಿಪಿ ಅವರ ಗಮನಕ್ಕೆ ತಂದ ಬಳಿಕ ಎಫ್‌ಐಆರ್‌ ದಾಖಲಾಗಿದೆ. ಕೊನೆಗೆ ರೈತನಿಗೆ ನ್ಯಾಯ ಸಿಗುವುದೆ ಕಾದು ನೋಡಬೇಕು. ಅರಣ್ಯ ಇಲಾಖೆ ಸಹ ಮೌನ ವಹಿಸಿದೆ ಎಂಬುದು ರೈತನ ಆರೋಪ.

Leave a Reply

Your email address will not be published. Required fields are marked *

error: Content is protected !!