
ಕರ್ನಾಟಕ ಗ್ರಾಮ ಪಂಚಾಯತ್
ಕಾರ್ಯದರ್ಶಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೮- ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್ ಒನ್ ಅಂಡ್ ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಸಂಘಕ್ಕೆ ನೂತನವಾಗಿ ಗೌರವಾಧ್ಯಕ್ಷರಾಗಿ, ಸಂಡೂರು, ಗ್ರೇಡ್ ಒನ್ ಕಾರ್ಯದರ್ಶಿ, ಪ್ರಭುವನ ಗೌಡ, ಜಿಲ್ಲಾ ಅಧ್ಯಕ್ಷರಾಗಿ, ಉದ್ದನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಗ್ರಾಮ ಪಂಚಾಯಿತಿ ಎಸ್ಡಿಎ ಎ, ರಾಜ ಸಾಬ್, ಜಿಲ್ಲಾ ಖಜಂಜಿಯಾಗಿ ರಾಮಪ್ಪ ಮಾಳಿಗಿ, ಉಪಾಧ್ಯಕ್ಷರುಗಳಾಗಿ, ಸಿ.ಕರಿಬಸಪ್ಪ, ಕೆ ಶಿವಮೂರ್ತಿ, ಕೆ ರುದ್ರಪ್ಪ, ಪರಮೇಶ್ವರ, ಹುಲುಗಪ್ಪ, ಖಾದರ್ ಭಾಷಾ ಸಹಕಾರಿದರ್ಶಿಗಳಾಗಿ, ಮಾಲಾಂಬಿ ಆಯ್ಕೆಯಾಗಿದ್ದಾರೆ. ನೂತನ ಸಂಘದ ಪದಾಧಿಕಾರಿಗಳನ್ನು ಈ ಸಂದರ್ಭವಾಗಿ ಎಲ್ಲಾ ನೌಕರರು ಅಭಿನಂದಿಸಲಾಯಿತು.