4a6ab5c7-c7c7-4bf8-991d-5a079d689511

ಗುದ್ನೇಶ್ಬರ ಜಾತ್ರಾ ಮಹೋತ್ಸವದ ಅಂಗವಾಗಿ

ಕುಕನೂರಿನಲ್ಲಿ ಬಿ.ಎಸ್.ಆರ್. ನಾಟಕ ಸಂಘದಿಂದ ನಾಟಕ ಪ್ರದರ್ಶನ

                            ಡಿ. 22 ರಂದು ನಾಟಕ ಪ್ರದರ್ಶನ ಆರಂಭ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 26 ರಂದು ಜರುಗುವ ಕುಕನೂರಿನ ಗುದ್ನೇಶ್ಬರ ಜಾತ್ರಾ ಮಹೋತ್ಸವದ ಅಂಗವಾಗಿ ಕುಕನೂರಿನಲ್ಲಿ ತಮ್ಮ ಬಿ.ಎಸ್.ಆರ್. ನಾಟಕ ಸಂಘದಿಂದ ನಾಟಕ ಪ್ರದರ್ಶನ ನಡೆಲಿದೆ. ಡಿ. 22 ರಂದು ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ ಪ್ರತಿದಿನ ಎರಡು ಪ್ರದರ್ಶನ ಇರುತ್ತದೆ ಎಂದು ಕಂಪನಿ ಮಾಲಿಕರಾದ ಸುಜಾತಾ ಗುಬ್ಬಿ ಹೇಳಿದರು.

ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಕುಕನೂರು ಪಟ್ಟಣ ಪಂಚಾಯತ, ಪೊಲೀಸ್ ಠಾಣೆ ರಸ್ತೆ ಹತ್ತಿರ ಪ್ರದರ್ಶನ ಇದ್ದು ಡಿ. 22 ರಂದು ನಾಟಕ ಪ್ರದರ್ಶನ ಶಾಸಕರಾದ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ.

ಬೆದವಟ್ಟಿಯ ಶ್ರೀ ಶಿವಸಂಗಮೇಶ್ವರ ಮಹಾಸ್ವಾಮಿಗಳು , ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ. ಮಹಾದೇವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಬಿಜೆಪಿ ಮುಖಂಡ ನವೀನ ಗುಳಗಣ್ಣವರ, ಅರವಿಂದಗೌಡ ಪಾಟೀಲ,ಈರಪ್ಪ ಕುಡಗುಂಟಿ, ಉದ್ಯಮಿ ಅನಿಲ್ ಆಚಾರ್ ಜ್ಯೋತಿ ಬೆಳಗಿಸಲಿದ್ದಾರೆ.ಸಿಪಿಐ ಮೌನೇಶ ಪಾಟೀಲ್, ಪಿಎಸ್ಐ ಗುರುರಾಜ, ಪ.ಪಂ.ಮುಖ್ಯಾಧಿಕಾರಿ ಸುಬ್ರಹ್ಮಣ್ಯ, ಕಾಸಿಂ ತಳಕಲ್, ಅಂದಪ್ಪ ಜವಳಿ, ಶಿವಕುಮಾರ ನಾಗಲಾಪುರಮಠ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಮಹಾದೇವ ಹೊಸೂರ ವಿರಚಿತ ಜೇವರ್ಗಿ ರಾಜಣ್ಣ ನಿರ್ದೇಶನದ ಗಂಗಿ ಮನ್ಯಾಗ ಗೌರಿ ಹೊಲ್ದಾಗ ನಾಟಕ ಆರಂಭಗೊಳ್ಳಲಿದೆ. ನಾಟಕದಲ್ಲಿ ದ್ವಂದಾರ್ಥ , ಅಶ್ಲೀಲ ಸಂಭಾಷಣೆ ಇಲ್ಲದೆ ಕುಟುಂಬ ಸಮೇತ ನೋಡುವ ಸಾಮಾಜಿಕ ಹಾಸ್ಯ ನಾಟಕ ಇದಾಗಿದೆ. ತಾವು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು ನುರಿತ ಕಲಾವಿದರು ನಮ್ಮ ತಂಡದಲ್ಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಲೇಖಕರಾದ ಗಣೇಶ ಅಮೀನಗಡ, ಕಂಪನಿ ಮ್ಯಾನೇಜರ್ ವಿನಾಯಕ ಬೆನಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!