IMG-20231028-WA0027

 

ವಲಯ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ , 28 –  ನಗರದ ರಾಘವ ಕಲಾ ಮಂದಿರದಲ್ಲಿ ಎಐಡಿಎಸ್ಓ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯ ವಲಯ ಮಟ್ಟದ ವಿದ್ಯಾರ್ಥಿಗಳ ಅಧ್ಯಯನ ಶಿಬಿರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ AIDSO ರಾಜ್ಯ ಖಜಾಂಚಿ ಸುಭಾಷ್ ಅವರು ವಿದ್ಯಾರ್ಥಿ ಶಿಬಿರಗಳ ನಿಜವಾದ ಮಹತ್ವವೇನು, ಹಾಗೂ ಶಿಬಿರದ ಉದ್ದೇಶವೆಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದು, ನೀತಿ -ನೈತಿಕತೆ ಒಳ್ಳೆಯ ಸಂಸ್ಕೃತಿ ಬೆಳಯಬೇಕಂಬ ಆಶಯ. ಉದಾತ್ತವಾದ ಜೀವನ ಹಾಗೂ ಆದರ್ಶ ಎಂದರೇನು?, ಒಂದು ಕಡೆ ಚಂದ್ರಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡುವ ನಮ್ಮ ದೇಶ, ಮತ್ತೊಂದು ಕಡೆ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನವನ್ನು ತಲುಪಿದೆ, ಮಗದೊಂದು ಕಡೆ ಶ್ರೀಮಂತರು ತಮ್ಮ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ!! ಇದೇ ದೇಶದ ನಿಜವಾದ ಅಭಿವೃದ್ಧಿಯೇ ಎಂದು ಪ್ರಶ್ನಿಸುತ್ತಾ… ಹೀಗೆ ಹಲವಾರು ಪ್ರಮುಖ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಚಿಂತನೆ ಮಾಡಿ ಎಂದು ಮನವಿ ಮಾಡಿದರು.

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡಿ, ದಿನೇ ದಿನೇ ಕೆಳಮಟ್ಟಕ್ಕೆ ಕುಸಿಯುತ್ತಿರುವ ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಮೇಲೆತ್ತಲು , ಜನರ ನೋವುಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸು ವಿದ್ಯಾರ್ಥಿಗಳದ್ದಾಗಲು, , ಶೋಷಿತರ ಪರವಾಗಿ ಧ್ವನಿಯುತ್ತಲೂ ಶರತ್ ಚಂದ್ರರ ಉದಾತ್ತ ಮೌಲ್ಯಗಳುಳ್ಳ ಕಾದಂಬರಿಗಳು ಬಹಳ ಅವಶ್ಯಕವಾಗಿದೆ ಎಂದರು. ಪ್ರಮುಖವಾಗಿ ಅಧಿಕಾರ ಕಾದಂಬರಿ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಹೋರಾಟಗಾರರ, ಕ್ರಾಂತಿಕಾರಿಗಳ ಜೀವನ ಸಂಘರ್ಷಗಳನ್ನು ಭಾವನಾತ್ಮಕವಾಗಿ, ಸ್ಪೂರ್ತಿದಾಯಕವಾಗಿ ನಮ್ಮ ಮುಂದಿಟ್ಟಿದೆ ಎಂದರು. ದೇಶದ ಏಳಿಗೆಗೆ ಗಂಡು ಹಾಗೂ ಹೆಣ್ಣು ಮಕ್ಕಳ ಪಾತ್ರ ಎಂದಿಗೂ ಸಮಾನ, ಜೊತೆಗೆ ಈ ಕಾದಂಬರಿ, ಒಂದು ಕಡೆ ಹಳೆಯ ಗೊಡ್ಡು ಸಂಪ್ರದಾಯಗಳನ್ನು ದಿಕ್ಕರಿಸುವ, ಮತ್ತೊಂದು ಕಡೆ ಬ್ರಿಟಿಷರ ಅಮಾನವೀಯ ಶೋಷಣೆ ಹಾಗೂ ದಬ್ಬಾಳಿಕೆಗಳ ವಿರುದ್ಧ ಸಿಡಿದೇಳುವ ಮನೋಭಾವವನ್ನು ತೆರೆದಿಟ್ಟಿದೆ. ನಮ್ಮ ದೇಶದ ರಾಜಿರಹಿತ ಕ್ರಾಂತಿಕಾರಿಗಳ ಅಂತಿಮ ಗುರಿ ಕೇವಲ ಸುಧಾರಣೆಯಲ್ಲ, ಮಾನವನಿಂದ ಮಾನವನ ಶೋಷಣೆಯ ಕೊನೆ ಎಂದು ನಿಜವಾದ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯನ್ನು ಬಿಚ್ಚಿಟ್ಟಿದೆ. ಕೊನೆಯಲ್ಲಿ, ಈ ಸತ್ಯವನ್ನು ಅರಿತುಕೊಳ್ಳಲು ಈ ದೇಶದ ವಿದ್ಯಾರ್ಥಿಗಳೆಲ್ಲರೂ ತಮ್ಮ ವೈಜ್ಞಾನಿಕ ಪ್ರಜ್ಞಾಮಟ್ಟವನ್ನು ಉನ್ನತಿಕರಿಸಿಕೊಳ್ಳಬೇಕೆಂದು ಕರೆ ನೀಡಿದರು!

ಶಿಬಿರದಲ್ಲಿ AIDSO ಜಿಲ್ಲಾಧ್ಯಕ್ಷರು ರವಿಕಿರಣ್.ಜೆ.ಪಿ, ಉಪಾಧ್ಯಕ್ಷರು ಕೆ.ಈರಣ್ಣ, ಕಾರ್ಯದರ್ಶಿ ಕಂಬಳಿ ಮಂಜುನಾಥ, ಖಜಾಂಚಿ ಎಂ.ಶಾಂತಿ, ಗಂಗರಾಜ್, ಅನುಪಮಾ, ನಿಹಾರಿಕ, ಸಿದ್ದು, ಉಮಾ, ಪ್ರಮೋದ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!