ಕೇವಲ ಅಂಕಗಳಿಕೆ ಮಗುವನ್ನು ವಿಕಾಸಗೊಳಿಸದು
ವಿಠ್ಠಲ ಚೌಗಲಾ ಅಭಿಪ್ರಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೧- ಕೇವಲ ಅಂಕಗಳಿಕೆ ಮಗುವನ್ನು ವಿಕಾಸಗೊಳಿಸದು, ಓದಿನ ಜೊತೆಗೆ ಕ್ರೀಡೆ ಮತ್ತು ಲಲಿತ ಕಲೆಗಳ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆ ಬೇಕು ಎಂದು ತಹಶೀಲ್ದಾರ ವಿಠ್ಠಲ ಚೌಗಲಾ ಅಭಿಪ್ರಾಯಪಟ್ಟರು.
ಅವರು ಇಲ್ಲಿಗೆ ಸಮೀಪದ ಭಾಗ್ಯನಗರದ ಶ್ರೀ ಶಾರದಾಂಬಾ ಪಬ್ಲಿಕ್ ಶಾಲೆಯ ೯ನೇ ಶಾಲಾ ವಾರ್ಷಿಕೋತ್ಸವದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಕೇವಲ ಪುಸ್ತಕದಲ್ಲಿನ ಹುಳುಗಳನ್ನು ಮಾಡಿ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕತಿ, ಸಂಸ್ಕಾರ ಬೆಳೆಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ ಎಂದರು.
ಪ್ರಾಥಮಿಕ ಹಂತದಿAದಲೇ ಮಕ್ಕಳಿಗೆ ಶಿಸ್ತು ಮತ್ತು ಸಂಯಮ ಕಲಿಸುವ ಔದಾರ್ಯ ಬೆಳೆಸಿಕೊಳ್ಳಬೇಕು, ಮಕ್ಕಳಿಗೆ ಬರೀ ಪರ್ಸೆಂಟೇಜ, ಹೋಮ್ ವರ್ಕ್ ಮಾಡುವ ಒತ್ತಡ ಹಾಕಬಾರದು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಹಿರಿಯ ವಕೀಲರು ರಾಘವೇಂದ್ರ ಪಾನಘಂಟಿ ಮಾತನಾಡಿ, ಈ ಕಾರ್ಯಕ್ರಮದಲ್ಲಿನ ಜನಸ್ತೋಮವನ್ನ ನೋಡಿದರೆ ಇದೇ ೨೭ ರಂದು ಜರುಗಲಿರುವ ನಾಡಿನ ಐತಿಹಾಸಿಕ ಪ್ರಸಿದ್ದ ಕೊಪ್ಪಳದ ಮಹಾಮಹಿಮ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವದ ಟ್ರೆಲರ್ ಇಂದು ಭಾಗ್ಯನಗರದ ಶಂಕರಾಚಾರ್ಯರ ಮಠದಲ್ಲಿ ಬಿಡುಗಡೆಯಾಗಿದೆ ಎನಿಸುತ್ತಿದೆ, ಶಾಲೆಯ ವಾತಾವರಣ ತುಂಬಾ ಚನ್ನಾಗಿದೆ ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಎ.ಎಮ್. ಮದರಿ ಹಾಗೂ ಖ್ಯಾತ ವಾಣಿಜ್ಯೋದ್ಯಮಿ ಕೆ.ಎಸ್. ಗುಪ್ತಾರಿಗೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಸಾನಿದ್ಯವನ್ನು ಸದ್ಗುರು ಶ್ರೀ ಶಿವರಾಮ ಅವಧೂತ ಆಶ್ರಮ ಹೊಸಪೇಟೆಯ ಪೂಜ್ಯ ಶ್ರೀ ಸ್ವಾಮಿ ಶಿವಪ್ರಕಾಶಾನಂದ ಪರಮಹಂಸರು, ಶ್ರೀ ರುದ್ರಾವಧೂತ ಮಠ ಜಮಖಂಡಿಯ ಪೂಜ್ಯ ಶ್ರೀ ಸ್ವಾಮಿ ಕೃಷ್ಣಾನಂದ ಅವಧೂತರು, ಶ್ರೀ ಶಿವಾನಂದ ಮಠ ಮಠಮಾರಿ ರಾಯಚೂರಿನ ಪೂಜ್ಯ ಶ್ರೀ ಸ್ವಾಮಿ ಜ್ಞಾನಾನಂದ ಮಹಾರಾಜರು, ಜಗದ್ಗುರು ಶ್ರೀ ಶಂಕರಾಚಾರ್ಯ ಮಠ ಭಾಗ್ಯನಗರದ ಪೂಜ್ಯ ಶ್ರೀ ಶಿವರಾಮಕೃಷ್ಣಾನಂದ ಭಾರತಿ ಸ್ವಾಮಿಗಳು, ಜಗದ್ಗುರು ಶ್ರೀ ಶಂಕರಾಚಾರ್ಯ ಮಠ ಕಲ್ಲೂರಿನ ಪೂಜ್ಯ ಶ್ರೀ ಶಿವರಾಮಾನಂದ ಭಾರತಿ ಸ್ವಾಮಿಗಳು, ಭಾಗ್ಯನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ ಬಬಲಾದಿ, ಸಂಸ್ಥೆಯ ಸುಭಾಷ ಅಂಟಾಳಮರದ, ನಾಗುಸಾ ಮೇಘರಾಜ, ಮೋಹನಸಾ ಮೇಘರಜ, ಗ್ಯಾನೇಶ ಹ್ಯಾಟಿ, ರಮನಾಥಸಾ ಕಬಾಡೆ, ಕೃಷ್ಣ ಪಾನಘಂಟಿ, ಪ್ರಾಂಶುಪಾಲರಾದ ವನಿತಾ ಕೋರಿ, ಮುಖ್ಯೋಪಾಧ್ಯಾಯಿನಿ ಲತಾ ಜೀರಾಳ ಸೇರಿ ಅನೇಕರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಿಕ್ಷಕಿ ರಾಜಶ್ರೀ ಸ್ವಾಗತಿಸಿದರು, ಸಂಸ್ಥೆಯ ನಿರ್ದೇಶಕ ರಮೇಶ ಹ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಲತಾ ಜೀರಾಳ ವಾರ್ಷಿಕ ವರದಿ ವಾಚಿಸಿದರು, ಅಮೃತ ಕುಮಾರ ವಂದಿಸಿದರು.



