2c136fae-be38-4577-97e1-318669006cc9

ವಸತಿ ಶಾಲೆಯ ಬಾಲಕ

ಈಜಲು ಹೋಗಿ ಬಾಲಕ ನೀರು ಪಾಲು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೪- ಜಿಲ್ಲೆಯ ಕುಕನೂರ ತಾಲೂಕಿನ  ವಸತಿ ಶಾಲೆಯ ಬಾಲಕನೋರ್ವ ಗ್ರಾನೈಟ್‌ ಕ್ವಾರಿ ಹೊಂಡದಲ್ಲಿ ಈಜಲು ಹೊದ ವಿಧ್ಯಾರ್ಥಿ ನೀರು ಪಾಲಾಗಿದ್ದಾನೆ.
ಕೂಕನೂರು ಪಟ್ಟಣದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಮೃತ ದುರ್ದೈವಿ.ಸಂಕ್ರಾಂತಿ ನಿಮಿತ್ತ ಈಜಲು ಹೋಗಿದ್ದ ನಾಲ್ಕು ಜನ ಸ್ನೇಹಿತರೊಂದಿಗೆ ವಸತಿ ಶಾಲೆಯ ಕೌಂಪೌಂಡ ಹಾರಿ ಹಿಂದುಗಡೆಯಿರುವ ಕ್ವಾರಿಯಲ್ಲಿ ದೊಡ್ಡದಾಗಿ ಅಗೆದಿರುವ ನೀರಿ‌ನ ಹೊಂಡದಲ್ಲಿ ಈಜಲು ಹೋಗಿದ್ದಾರೆ  ಎಂದು ತಿಳಿದು ಬಂದಿದೆ.
ಈ ವೇಳೆ ಮೂವರಿಗೆ ಈಜಲು ಬಂದಿದ್ದು, ಕುಷ್ಟಗಿ ಮೂಲದ ಪ್ರದೀಪ್ ಈಜಲು ಬರದೇ ಹೊಂಡದಲ್ಲಿ ಮುಳುಗಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಶವ ಹುಡುಕುತ್ತಿದ್ದಾರೆ. ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲಿಸರು ಕಾರ್ಯಾಚರಣೆ ಮುಂದು ವರೆದಿದೆ.

Leave a Reply

Your email address will not be published. Required fields are marked *

error: Content is protected !!