ವಿವಿಧ ಬೇಡಿಕೆಗಲಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ
ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಬೃಹತ್ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೧೭- ನಗರದಲ್ಲಿ ವಿವಿಧ ಬೇಡಿಕೆಗಲಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಬೃಹತ್ ಪ್ರತಿಭಟನೆ ಮಾಡಿ ಗು.ವಿ.ಕಂ.ನಿ.ನಿಯಮಿತದ ಅಧೀಕ್ಷಕ ಅಭಿಯಂತರರಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರದಂದು ನಗರದ ತಹಶೀಲ್ದಾರ ಬಳಿಯ ಕೆಇಬಿ ಕಚೇರಿಯಿಂದ ಪ್ರತಿಭಟನೆ ಮೂಖಾಂತರ ತೇರಳಿ ಹೊಸಪೇಟೆ ರಸ್ತೆಯ ಬುದ್ಧ ಬಸವ ಹಾಗೂ ಡಾ, ಅಂಬೇಡ್ಕರ್ ಪಾರ್ಕ ಬಳಿ ಪ್ರತಿಭಟನೆ ನಡೆಸಿದ್ದರು.
ಮನವಿಯಲ್ಲಿ 1 ಲಕ್ಷದಿಂದ 5 ಲಕ್ಷದ ವರೆಗೆ ತುಂಡು ಗುತ್ತಿಗೆಯ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲು ಈಗಾಗಲೇ ಇಲಾಖೆಯ ಆದೇಶವಿದ್ದರೂ ಕಲ್ಯಾಣ ಕರ್ನಾಟ ಭಾಗದಲ್ಲಿ ಜಾರಿಯಾಗಬೇಕು. ಸ್ವಂತ ಖರ್ಚಿನ ಕಾಮಗಾರಿಗಳಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಹಾಗೂ ಪಂಪಸೇಟ್ ಗಳಿಗೆ 4 ಸ್ಟಾರ್ ಪರಿವರ್ತಕಗಳನ್ನು ಆಳವಡಿಸುವ ಬಗ್ಗೆ ಅನುಮತಿ ನೀಡಬೇಕು.
ಲೇಔಟ್ ಗಳಿಗೆ ಡಿ.ಸಿ.ಡಬ್ಲ್ಯೂ ವಿಭಾಗದಲ್ಲಿ 01 ಟಿ.ಸಿ. ಯನ್ನು ಸ್ವಂತ ಖರ್ಚಿನಲ್ಲಿ ಆಳವಡಿಸಿಕೊಳ್ಳಲು ಅನುಮತಿ ನೀಡಬೇಕು. ಲೇಔಟ್ ಗಳಿಗೆ 250 ಕೆವಿಎ ಪರಿವರ್ತಕಗಳನ್ನು ಅಳವಡಿಸಲು ಅನುಮೋದನೆ ನೀಡಬೇಕು.ಸ್ವಂತ ಖರ್ಚಿನ ಯೋಜನೆಯಡಿಯಲ್ಲಿ ಎಲ್.ಟಿ ಲೈನ್ ಎಕ್ಸಟೆನ್ನನ್ ಮಾಡಿ ಐ.ಪಿ. ಸೆಟ್ ಗಳಿಗೆ ಆರ್.ಆರ್. ನಂಬರ್ ನೀಡಬೇಕು. ಅಕ್ರಮ ಸಕ್ರಮ ಸೆಪ್ಟೆಂಬರ್-2023 ಕ್ಕಿಂತ ಮುಂಚೆ ವಿದ್ಯುತ್ ಮಂಜೂರಾತಿ ಪಡೆದು ಹಣವನ್ನು ಸಂದಾಯಿಸಿದವರಿಗೆ ತಕ್ಷಣವೇ ಆರ್.ಆರ್. ನಂಬರ್ ಕೊಡಬೇಕು. ಲೇಔಟ್ ಗಳಲ್ಲಿ ಸಿಎ ಸೈಟನ್ನು ಅಸಿಸ್ ಲೋಡಗಳಲ್ಲಿ ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ.
ಹೊಸ ಲೇಔಟ್ಗಳಿಗೆ ಅಂದಾಜು ಪಟ್ಟಿ ಸಿದ್ದಪಡಿಸುವಾಗ ( A ಸೈಟ್ನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗುತ್ತಿದ್ದು ಸದರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ C A ಸೈಟ್ನ್ನು ಬಿಟ್ಟು ಅಂದಾಜು ಪಟ್ಟಿ ಸಿದ್ದಪಡಿಸಲು ಆದೇಶ ನೀಡಬೇಕು.
ಲೇಬರ್ ಅವಾರ್ಡ ಮುಖಾಂತರ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ಗಳನ್ನು ಹಾಜರು ಪಡಿಸಿದರು ಸುಮಾರು 4 ರಿಂದ 6 ತಿಂಗಳು ಗತಿಸಿದರು ಸಹ ಬಿಲ್ಗಳನ್ನು ಪಾಸ್ ಮಾಡುತ್ತಿರುವುದಿಲ್ಲ. 2022-23ನೇ ಸಾಲಿನ ತುರ್ತು ಕಾಮಗಾರಿಗಳಾದ ಮಳೆಗಾಳಿಗೆ ಬಿದ್ದಂತಹ ವಿದ್ಯುತ್ ಕಂಬಗಳ ಕಾಮಗಾರಿಗಳನ್ನು ಇಂಪ್ರೆಸ್ಟ ಮುಖಾಂತರ ಪಡೆದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅವುಗಳ ಅಂದಾಜು ಪಟ್ಟಿಯನ್ನು ವಿಭಾಗೀಯ ಕಾರ್ಯಾಲಕ್ಕೆ ಸಲ್ಲಿಸಿ ಸುಮಾರು ತಿಂಗಳುಗಳಾದರು ಬಜೆಟ್ ಇಲ್ಲದೆ ಮಂಜೂರಾತಿ ನೀಡಿರುವುದಿಲ್ಲ. ಆದ್ದರಿಂದ ಆದಷ್ಟು ಬೇಗನೆ ಮಂಜೂರಾತಿ ನೀಡಬೇಕು.
ಹೊಸ ಲೇಔಟ್ಗಳಿಗೆ ಮಂಜೂರಾತಿ ನೀಡುವಾಗ ಮೊದಲ ಒಂದು ವಿದ್ಯುತ್ ಪರಿವರ್ತಕವನ್ನು ಸ್ವಂತ ಖರ್ಚಿನಿಂದ ಗ್ರಾಹಕರೇ ಅಳವಡಿಸಿಕೊಳ್ಳಲು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಮಂಜೂರಾತಿಯನ್ನು ನೀಡಿರುತ್ತಾರೆ. ಆದ್ದರಿಂದ ಇಲ್ಲಿಯೂ ಸಹ ಇದೆ ರೀತಿಯ ಅನುಕೂಲವನ್ನು ಕಲ್ಪಿಸಿ ಕೊಡಬೇಕು ಸೇರಿದಂತೆ ೨೫ ಬೇಡಿಕೆ ಉಳ್ಳ ಮನವಿಸಲ್ಲಿಸಿದ್ದಾರೆ.
ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಆಸೀಫ್ ಇಕ್ಬಾಲ ಡಾಲಾಯತ್ , ಜಿಲ್ಲಾಕಟ್ಟಡ ಸಮಿತಿ ಅಧ್ಯಕ್ಷ ಮೌಲಾಸಾಭ ಬನ್ನಿಕೊಪ್ಪ ,ಭಾಗ್ಯನಗರ ಪ,ಪಂ ಸದಸ್ಯ ರೋಷನ್ ಅಲಿ, ಜಿಲ್ಲಾ ಉಪಾಧ್ಯಕ್ಷರಾದ ಶೇಖರಗೌಡ ಪೋಲಿಸ್ ಪಾಟೀಲ್ ಹಾಗೂ ಕರಿಬಸಪ್ಪ ಗೋಟೂರು. ಗೌರವ ಕಾರ್ಯದರ್ಶಿ ಎಮ್ ನಾರಾಯಣ, ಜಂಟಿ ಕಾರ್ಯದರ್ಶಿ ಪ್ರಕಾಶ. ಸಂಘಟನಾ ಕಾರ್ಯದರ್ಶಿ ರಾಜಾಭಕ್ಷಿ. ಖಜಾಂಚಿ ಬಸವರಾಜ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಇದ್ದರು.
