5ea4d978-4e1c-4a82-9cc4-1b1ee436344c

  ಬಾಕಿ ಹಣ ಪಾವತಿಸಲು ವ್ಯಾಪಾರಸ್ತರು ಆಗ್ರಹ

    ವಿಷದ ಬಾಟಿಲು ಹಿಡಿದು ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೮- ಕುಷ್ಟಗಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡಲು ವಿವಿಧ ಸಾಮಗ್ರಿ ಸರಬರಾಜು ಮಾಡಿದ ವ್ಯಾಪಾರಿಗಳಿಗೆ ಜಿಲ್ಲಾ ಪಂಚಾಯಿತಿ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಆಗ್ರಹಿಸಿ  ನಗರದ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿ ಮುಂದೆ ಸಾಮಾಗ್ರಿ ಸರಬರಾಜದಾರರ ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಿಗ್ಗೆ  ವಿಷದ ಬಾಟಲ್ ಸಮೇತ ಕಚೇರಿಗೆ ಆಗಮಿಸಿರುವ ಸರಬರಾಜುದಾರರು, ನಮ್ಮ ಬಿಲ್ ಬಿಡುಗಡೆ ಮಾಡಿ, ಇಲ್ಲದಿದ್ದರೆ ಇಲ್ಲೇ ವಿಷ ಕುಡಿದು ಸಾಯುತ್ತೇವೆ ಎಂದು ಎಚ್ಚರಿಸಿದರು.

ಕಳೆದ ಐದು ವರ್ಷಗಳಲ್ಲಿ 35 ಕೋಟಿ ರೂ. ಬಾಕಿ ನೀಡಬೇಕು. ಸುಮಾರು 200 ವ್ಯಾಪಾರಿಗಳಿಗೆ ₹10 ಕೋಟಿ ನೀಡಬೇಕಾಗಿದೆ‌. 2019ರಲ್ಲಿಯೇ ನರೇಗಾ ಕಾಮಗಾರಿಗೆ ಸಾಮಗ್ರಿ ಪೂರೈಕೆ ಮಾಡಿದ್ದೆವು. ಮೂವರು ಜಿಲ್ಲಾ ಪಂಚಾಯಿತಿ ಸಿಇಒ ಬದಲಾದರೂ ಹಣ ಪಾವತಿಯಾಗಿಲ್ಲ ಎಂದು ದೂರಿದರು.

ಕಾಮಗಾರಿ ಮುಗಿದರೂ ಬಿಲ್ ನೀಡುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ನಮ್ಮ ವೇತನ ಪಾವತಿ ಮಾಡದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ‌ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಕುಷ್ಟಗಿ ತಾಲ್ಲೂಕು ಪಂಚಾಯಿತಿ ಇಒ ನೀವು ಪೂರೈಸಿದ ಕಾಮಗಾರಿಗಳ ಕಡತ ಪರಿಶೀಲನೆ ಮಾಡಿದ್ದಾರೆ. ಅವು ಸರಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಮಸ್ಯೆ ಪರಿಹಾರವಾಗುವ ತನಕ ವೇತನ ಪಾವತಿಸಲು ಬರುವುದಿಲ್ಲ. ಮುಂದಿನ ವಾರ ಖುದ್ದು ನಾನೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

 

Leave a Reply

Your email address will not be published. Required fields are marked *

error: Content is protected !!