IMG_20240118_110556

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ

ಕೊಪ್ಪಳದಲ್ಲಿ 21 ಹಾಗೂ 22ರಂದು ವಿವಿಧ ಧಾರ್ಮಿಕ

ಡಾ. ಕೆ.ಜಿ. ಕುಲಕರ್ಣಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಮಿತಿಯು ನಗರದಲ್ಲಿ ಜ. 21 ಹಾಗೂ 22ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಾಹ್ಮಣ ಸಮಾಜದ ಹಿರಿಯರಾದ ಡಾ.ಕೆ.ಜಿ. ಕುಲಕರ್ಣಿ ರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಗರದ ಗೋವಿಂದರಾಯನ ಗುಡಿ ಹತ್ತಿರವಿರುವ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದಲ್ಲಿ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞ ಮತ್ತು ಶ್ರೀರಾಮ ತಾರಕ ಮಹಾಯಾಗ ನಡೆಯಲಿದೆ ಎಂದು ತಿಳಿಸಿದರು.

21ರಂದು ಬೆಳಿಗ್ಗೆ 9 ಗಂಟೆಗೆ ಬೈಕ್‌ ರ್‍ಯಾಲಿ ಹಮ್ಮಿಕೊಂಡಿದ್ದು, ಗದಗ ರಸ್ತೆಯಲ್ಲಿರುವ ಶ್ರೀರಾಮಮಂದಿರದಿಂದ ವಿವಿಧ ರಸ್ತೆಗಳ ಮೂಲಕ ಬ್ರಾಹ್ಮಣ ವಿದ್ಯಾರ್ಥಿ ಸದಾಚಾರ ಭವನದ ತನಕ ರ್‍ಯಾಲಿ ಜರುಗಲಿದೆ. ಇದರಲ್ಲಿ ಅಂದಾಜು 300 ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದೇ ದಿನ ಸಂಜೆ 5.30ಕ್ಕೆ ರಾಘವೇಂದ್ರ ಸ್ವಾಮಿ ಮಠದಿಂದ ವಾದ್ಯಗಳು ಮತ್ತು ಭಜನಾ ಮಂಡಳಿಗಳೊಂದಿಗೆ ಸದಾಚಾರ ಭವನದ ತನಕ ಶೋಭಾಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ವಿವರಿಸಿದರು.

ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಪಹಾರದ ಬಳಿಕ ಜನ ತಮ್ಮ ಮನೆಗೆ ವಾಪಸ್‌ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ. 22ರಂದು ಬೆಳಿಗ್ಗೆ 9 ಗಂಟೆಗೆ ಪುಣ್ಯಾಹವಾಚನ ಮತ್ತು ದೇವತಾ ಸ್ಥಾಪನೆ, ಮಧ್ಯಾಹ್ನ 12.20ಕ್ಕೆ ಶ್ರೀರಾಮತಾರಕ ಮಹಾಯಾಗದ ಪೂರ್ಣಾಹುತಿ, 12.30ಕ್ಕೆ ಸಭಾ ಕಾರ್ಯಕ್ರಮ ಮತ್ತು 1.30ಕ್ಕೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದರು.

ಬೈಕ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳುವವರು ವಿಜಯಕುಮಾರ ಪದಕಿ (7019913588) ಶತಕೋಟಿ ರಾಮತಾರಕ ನಾಮ ಜಪ ಮಾಡಿದ ಭಕ್ತರು, ಸಂಘಸಂಸ್ಥೆಗಳು, ಭಜನಾ ಮಂಡಳಿಗಳ ಜಪ ಸಂಖ್ಯೆಯನ್ನು ತಿಳಿಸಲು ವಿಶ್ವನಾಥ ದೀಕ್ಷಿತ್‌ (9591953716), ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಜನಾ ಮಂಡಳಿಗಳು ರವೀಂದ್ರ ಆಶ್ರಿತ (9845597977) ಅವರಲ್ಲಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.

ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತರಾವ್ ದೇಶಪಾಂಡೆ, ಸಮಾಜದ ಮುಖಂಡರಾದ ವೇಣುಗೋಪಾಲಚಾರ್ ಜಹಗೀರದಾರ, ಮಲ್ಲಾರಭಟ್‌ ಜೋಶಿ ಮತ್ತು ರಾಘವೇಂದ್ರ ನರಗುಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!