1705576334290

ಪಾಮನಕಲ್ಲೂರು ಸಮಸ್ಯೆ ಪರಿಹಾರಕ್ಕೆ ಸಂಸದ ಸಂಗಣ್ಣ ಕರಡಿ ರವರ ಮೊರೆ ಹೋದ ಗ್ರಾಮದ ಯುವಕರು

ಕರುನಾಡ ಬೆಳಗು ಸುದ್ದಿ

ರಾಯಚೂರು,18- ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಪಾಮನಕಲ್ಲೂರು ಗ್ರಾಮದ ಯುವಕರು ಕೊಪ್ಪಳ ಸಂಸದ ಸಂಗಣ್ಣ ಕರಡಿರವರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ನಗರದಲ್ಲಿನ ಸಂಸದ ಸಂಗಣ್ಣ ಕರಡಿರವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಯುವಕರು, ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿ, ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಸಂಸದರು ಸಂಬAಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದರು.

ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಪಟ್ಟಿ:

೧) ಮುಖ್ಯರಸ್ತೆಯಲ್ಲಿರುವ ಕಳೆದ ಅನೇಕ ವರ್ಗಗಳಿಂದ ಕೆಟ್ಟು ನಿಂತಿರುವ (ಹಾಳಾಗಿರುವ) ಹೈಮಾಸ್ಕ್ ಲೈಟ್ ಮತ್ತು ಕಂಬವನ್ನು ದುರಸ್ತಿ ಮಾಡಬೇಕು ಅಥವಾ ಹೊಸ ಹೈಮಾಸ್ಕ್ ಲೈಟ್ & ಕಂಬವನ್ನು ನಿರ್ಮಿಸಬೇಕು.

೨) ಬಸ್ ನಿಲ್ದಾಣವಿಲ್ಲದೇ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ನೂತನ ಬಸ್ ನಿಲ್ದಾಣ ನಿರ್ಮಿಸಿಕೊಡಬೇಕು.

೩) ಗ್ರಾಮದಲ್ಲಿನ ವಿವಿಧ ವಾರ್ಡ್ ಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು.

೪) ಪಾಮನಕಲ್ಲೂರು ಗ್ರಾಮದಲ್ಲಿ ಪಿಯುಸಿ ಮತ್ತು ಪದವಿ ಕಾಲೇಜು ನಿರ್ಮಿಸಬೇಕು.

೫) ಪರಿಶಿಷ್ಟ್ಟ ಪಂಗಡದ ಜನರಿರುವ ಕಾನ್ಯಾಳ ಭಾಗಕ್ಕೆ ಸಿಸಿ ರಸ್ತೆ ನಿರ್ಮಿಸಬೇಕು.

೬) ಪಾಮನಕಲ್ಲೂರು ಗ್ರಾಮದ ಆನಂದಗಲ್ ಅಂಬಮ್ಮ ಮನೆಯಿಂದ ಅಂಬೇಡ್ಕರ್ ಭವನದ ಹೊರಗೆ ಸಿಸಿ ರಸ್ತೆ ನಿರ್ಮಿಸಬೇಕು.

೭) ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಹಗರಣವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.

೮) ಪಾಮನಕಲ್ಲೂರು ಗ್ರಾಮದಲ್ಲಿನ ಮುಖ್ಯರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಸಂಬAಧಿಸಿದ ಇಲಾಖೆಗೆ ಸೂಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು.

೯) ನಾಡಕಛೇರಿಗೆ ಸರ್ಕಾರಿ ಕಟ್ಟಡ ನಿರ್ಮಿಸಿಕೊಡಬೇಕು.

೧೦) ಪಾಮನಕಲ್ಲೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಖೋ ಖೋ, ಕಬಡ್ಡಿ ಗ್ರೌಂಡ್ ನಿರ್ಮಿಸಿಕೊಡಬೇಕು ಎಂಬ ಅನೇಕ ಬೇಡಿಕೆಗಳು ಸಂಸದ ಸಂಗಣ್ಣ ಕರಡಿರವರಿಗೆ ಪಾಮನಕಲ್ಲೂರು ಗ್ರಾಮದ ಯುವಕರು ಸಲ್ಲಿಸಿದ ಮನವಿ ಪತ್ರದಲ್ಲಿದ್ದವು.
ಸಂಸದರು ನಮಗೆ ಸಮಯ ಕೊಟ್ಟು ನಮ್ಮ ಮನವಿ ಸ್ವೀಕರಿಸಿದ್ದಾರೆ:

ನಮ್ಮ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸಂಗಣ್ಣ ಕರಡಿರವರನ್ನು ಗುರುವಾರ ನಾವು ಕೊಪ್ಪಳ ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಅವರು ನಮಗೆ ಸಮಯ ಕೊಟ್ಟು ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. ನಾವು ಹೇಳಿದ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸಿದ ಅವರು, ಅಧಿಕಾರಿಗಳೊಂದಿಗೆ ಪೋನ್ ನಲ್ಲಿ ಮಾತನಾಡಿ ಕೂಡಲೇ ಪರಿಹರಿಸಲು ತಿಳಿಸಿದ್ದಾರೆ. ಸಂಸದರು ನಮಗೆ ಸಮಯ ಕೊಟ್ಟು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಹಂತಹಂತವಾಗಿ ನಮ್ಮ ಗ್ರಾಮದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವ ಭರವಸೆ ನಮಗಿದೆ ಎಂದು ಮನವಿ ಸಲ್ಲಿಸಿದ ಪಾಮನಕಲ್ಲೂರು ಗ್ರಾಮದ ಯುವಕರಾದ ರಮೇಶ್ ಗಂಟ್ಲಿ, ಲಕ್ಷ್ಮಣ ಚೌಡ್ಲಿ, ಅಮರೇಶ್ ಡಿ ಪೂಜಾರಿ, ಮಂಜುನಾಥ ಸ್ವಾಮಿ ಜಿನ್ನದ್, ರಮೇಶ್ ಭೋವಿ ಚಿಲ್ಕರಾಗಿ, ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!