ಗಂಟೆ ಹಾಗೂ ಬೈಕ್ ಕಳ್ಳನ ಬಂಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 21- ದೇವಸ್ಥಾನದ ಗಂಟೆಗಳು ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಕಳ್ಳನನ್ನು ಮುನಿರಾಬಾದ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಕದ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡ ತಾಂಡಾದ ವಿರೇಶನಾಯ್ಕ್ (34) ಬಂಧಿತ ಅರೋಪಿಯಾಗಿದ್ದಾನೆ.
ಪೋಲೊಸರು ಬಂಧಿತ ಆರೋಪಿಯಿಂದ 50 ಸಾವಿರ ರೂ. ಮೌಲ್ಯದ ದನಕನದೊಡ್ಡಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದ 7 ಗಂಟೆಗಳು ಹಾಗೂ 1.90,000ರೂ. ಮೌಲ್ಯದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
