
ಭೂ ನ್ಯಾಯಮಂಡಳಿ ಅಧಿಕಾರೇತರ ಸದಸ್ಯರಾಗಿ ಗವಿಸಿದ್ದಪ್ಪ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ತಾಲೂಕು ಭೂ ನ್ಯಾಯಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬೇಳೂರಿನ ಗವಿಸಿದ್ದಪ್ಪ ಭರಮಪ್ಪ ಇಡಗಲ್ ಅವರನ್ನು ನಾಮನಿರ್ದೇಶನ ಮಾಡಿ ಕಂದಾಯ ಇಲಾಖೆಯ( ಭೂ ಸುಧಾರಣೆ) ಸರ್ಕಾರದ ಅಧೀನ ಕಾರ್ಯದರ್ಶಿ ಗೌರಮ್ಮ ಆರ್., ಅವರು ಇಂದು ಆದೇಶಿಸಿದ್ದಾರೆ.
ಕರ್ನಾಟಕ ಭೂ ಸುಧಾರಣೆ ಕಾಯಿದೆ 1961ರ ಕಲಂ 48ರ ಉಪ ಕಲಂ (1) ರಿಂದ (3) ರಲ್ಲಿ ಪ್ರದತ್ತವಾದ ಅಧಿಕಾರನ್ನು ಚಲಾಯಿಸಿ ಕೊಪ್ಪಳ ತಾಲೂಕಿನ ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಕೊಪ್ಪಳ ಉಪ ವಿಭಾಗದ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸದಸ್ಯರಾಗಿ ಪರಿಶಿಷ್ಟ ಜಾತಿಯ ಬಸಾಪುರ ಗ್ರಾಮದ ಆನಂದ ಸವರಪ್ಪ,
ಸಾಮಾನ್ಯ ವರ್ಗದಿಂದ ಬೇಳೂರಿನ ಗವಿಸಿದ್ದಪ್ಪ ಭರಮಪ್ಪ ಇಡಗಲ್, ಮಾದಿನೂರಿನ ರೇಣುಕಾ ಬಸವರಾಜ ಕೊರವರ್ ಮತ್ತು ಮುನಿರಾಬಾದಿನ ವಿಜಯಕುಮಾರ್ ಸಾಂಬಶಿವರಾವ್ ಇವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ ಅವರನ್ನು ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.