ಗವಿಮಠದ ಕೆರೆಗೆ ‘ಸಾಹಸದಿಂದ’ ನೀರು ತಂದ ಸ್ವಾಮೀಜಿ
ನಗರಸಭೆ ಸೋಮಲಿಂಗಪ್ಪ ಹಾಗೂ ಸಿಬಂದಿಯ ಕೆಲಸಕ್ಕೆ ಮೆಚ್ಚುಗೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ತಾಂತ್ರಿಕ ತೊಂದರೆಯಿಂದ ಗವಿಮಠದ ಕೆರೆಗೆ ನೀರಿನ ಕೊರೆತೆ ಇತ್ತು ಸೋಮವಾರ ರಾತ್ರಿ ಗವಿಮಠದ ಶ್ರೀಗಳು ರಾತ್ರಿ ಇಡಿ ಜಾಗರಣೆ ಮಾಡಿದ್ದಾರೆ.
ಜಾತ್ರೆಯ ವಿದ್ಯುತ್ ದೀಪಗಳ ಹೊಳಪಿನ ನಡುವೆ ಗವಿಮಠದ ಆವರಣದಲ್ಲಿರುವ ಕೆರೆಯಲ್ಲಿ ಪ್ರತಿವರ್ಷ ನಡೆಯುವ ತೆಪ್ಪೋತ್ಸವ ಜಾತ್ರೆಯ ಪ್ರಮುಖ ಆಕರ್ಷಣೆ.
ಆದರೆ ಈ ಬಾರಿ ಅಲ್ಲಿ ನೀರಿನ ಕೊರತೆಯಿತ್ತು. ಆದರೆ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮತ್ತು ನಗರಸಭೆ ಅಧಿಕಾರಿಗಳ ಅವಿರತ ‘ಸಾಹಸದಿಂದಾಗಿ’ ಕೆರೆಗೆ ತುಂಬಿ ಬಂದಿರುವ ನೀರು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ.
ತುಂಗಭದ್ರಾ ನದಿಯಿಂದ ಕೆರೆಗೆ ನೀರು ಬರುತ್ತದೆ. ಬರುವ ಮಾರ್ಗದ ಕೊಳವೆಗಳಲ್ಲಿ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿದ್ದರಿಂದ ಮಠದ ಕೆರೆಗೆ ಸರಾಗವಾಗಿ ನೀರು ಬರುತ್ತಿರಲಿಲ್ಲ. ಇದರಿಂದ ಬುಧವಾರ ನಿಗದಿಯಾಗಿರುವ ತೆಪ್ಪೋತ್ಸವಕ್ಕೆ ಅಡ್ಡಿಯಾಗುವ ಆತಂಕವಿತ್ತು.
ಸೋಮವಾರ ರಾತ್ರಿ ಸ್ವಾಮೀಜಿ ಮತ್ತು ನಗರಸಭೆ ಎಂಜಿನಿಯರ್ ಸೋಮಲಿಂಗಪ್ಪ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದ ತನಕ ಶ್ರಮಪಟ್ಟ ಸರಾಗ ಹರಿವಿಗೆ ನೆರವಾದರು ಎಂದು ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಗವಿಮಠದ ಕೆರೆಗೆ ತುಂಗ ಭದ್ರಾ ಜಲಾಶಯದ ದಿಂದ ನೀರು ಬಿಡಲಾಯಿತಾದರು ತಾಂತ್ರಿಕ ತೊದರೆಯಿಂದ ಕೆರೆಗೆ ನೀರು ಬರಲಿಲ್ಲಾ.
ಕೇರೆಗೆ ನೀರು ಬರದೆ ಇರುವುದು ನಗರಸಭೆ ಸಿಭಂದಿಗೆ ಆತಂಕ ಸೃಷ್ಟಿಸತು. ರಾತ್ರಿ ಪೈಪ್ ಬಂದಾಗಿರುವ ಶಂಕೆಯಿಂದ ತಗ್ಗು ಅಗೆದು ಪೈಪ್ ಸರಿಮಾಡಲಾಯಿತು ಎಂದು ತಿಳಿದು ಬಂದಿದೆ.
ಒಂದು ಕಡೆ ನಗರಸಭೆ ಸಂಬಂದಿ ಹಾಗೂ ಕೆರೆಯ ದಡದಲ್ಲಿ ಒಂದು ಕಡೆ ಶ್ರೀಗಳು ಇಡಿರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ. ದುರಸ್ತಿ ಯಾಗಿ ಮಂಗಳವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೆರೆಗೆ ನೀರು ಬಂದ ನಂತರ ಪೂಜ್ಯರು ವಿಶ್ರಾಂತಿ ಪಡೆದಿದ್ದಾರೆ ಎನ್ನಲಾಗಿದೆ.

ಅವಿತರ ಪ್ರಯತ್ನ : ನಗರಸಭೆ ಎಂಜಿನಿಯರ್ ಸೋಮಲಿಂಗಪ್ಪ ಹಾಗೂ ನಗರಸಭೆ ಸಿಭಂದಿ ಮತ್ತು ಜೆಸಿಬೆ ಸೋಮವಾರ ರಾತ್ರಿಇಡಿ ಶ್ರಮಸಿ ದುರಸ್ತಿ ಮಾಡಿದ್ದಾರೆ.
ನಗರಸಭೆಯ ಎಂಜಿನಿಯರ್ ಸೋಮಲಿಂಗಪ್ಪ ( ಸೋಮು) ಹಾಗೂ ಸಿಬ್ಬಂದಿಯ ಶ್ರಮಕ್ಕೆ ಗವಿಮಠದ ಭಕ್ತರು ಹಾಗೂ ನಾಡಿನ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.
