
ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಹಂಪಿಗೆ ಭೇಟಿನೀಡಿ ವೇದಿಕೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು
ಕರುನಾಡ ಬೆಳಗು ಸುದ್ದಿ
ಹಂಪಿ ಉತ್ಸವ : ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಹಂಪಿಗೆ ಭೇಟಿನೀಡಿ ವೇದಿಕೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ರಾಜ್ಯದ ಜನರು ಇದೇ ಫೆ.2,3 ಮತ್ತು 4ರಂದು ನಡೆಯಲಿರುವ ಉತ್ಸವಕ್ಕೆ ಉಚಿತ ಬಸ್ಸುಗಳನ್ನು ಬಿಟ್ಟಿದ್ದು ಎಲ್ಲರೂ ಕುಟುಂಬಸಮೇತರಾಗಿ ಆಗಮಿಸಿ ಉತ್ಸವವನ್ನು ನೋಡಿ ಕಣ್ತುಂಬಿಕೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಶಾಸಕರಾದ ಹೆಚ್ ಆರ್ ಗವಿಯಪ್ಪ, ಡಾ. ಶ್ರೀನಿವಾಸ್, ನೇಮಿರಾಜ್ ನಾಯ್ಕ್, ಎಂ ಪಿ ಲತಾ, ಸಂಸದ ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್, ಚಿತ್ರನಟ ಸಾದುಕೋಕಿಲ, ಸಿ ಇ ಒ ಸದಾಶಿವ ಪ್ರಭು, ತಹಶೀಲ್ದಾರ್ ವಿಶ್ವಜಿತ್ ಮೆಹತಾ ಮತ್ತು ಇತರ ಇಲಾಖೆಯ ಅಧಿಕಾರಿಗಳು ಇದ್ದರು.