1gvt2

ಮಾಚಿದೇವರ ಸ್ಮರಣೆ ನಿರಂತರವಾಗಿರಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ,1- ಮಡಿವಾಳ ಮಾಚಿದೇವರ ಸ್ಮರಣೆ ನಿರಂತರವಾಗಿರಲಿ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಮಡಿವಾಳ ಮಾಚಿದೇವ ದೇವಸ್ಥಾನದ ಆವರಣದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಶೋತ್ಸವ ಹಾಗೂ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟಿಸಿ ಮಾತನಾಡಿ ಮಡಿವಾಳರ ಕ್ಷೇಮಾಭಿವೃ ದ್ಧಿ ಸಂಘ ಅಸಿತ್ವಕ್ಕೆ ಬಂದಿದ್ದು ಔಚಿತ್ಯ ಪೂರ್ಣವಾಗಿದೆ.

ಸಮಾಜದ ಮಕ್ಕಳಿಗೆ ಶಿಕ್ಷಣ ಕೋಡಿ,ಸಮಾಜವನ್ನು ಸಂಘಟಸಿ ಸರಕಾರದಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ವಾಣಿಜೋದ್ಯಮಿ ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಮಾಜಿ ಸದಸ್ಶ ರಾಚಪ್ಪ ಸಿದ್ದಪೂರ, ಸಂಘದ ಗೌರವ ಅದ್ಶಕ್ಷ ನಾಗರಾಜ ಮಡಿವಾಳ, ಅದ್ಶಕ್ಷ ಕನಕಪ್ಪ ಬಂಡ್ರಾಳ, ಶೇಖರಸ್ವಾಮಿ ವೆಂಕಟೇಶ ಬಾಂಬೆ,ಸತ್ಶಪ್ಪ, ಕನಕಗಿರಿ ಈರಣ್ಣ,ದುರ್ಗಾಪ್ರಸಾದ,ಹೇರೂರ ಬಸವರಾಜ, ಶಿವು ಕಲ್ಮಠ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!