ಐತಿಹಾಸಿಕ ಹಂಪಿ ಉತ್ಸವಕ್ಕೆ ಅದ್ಧೂರಿ ಚಾಲನೆ
ವಿಜಯನಗರ ಅರಸರ ಕಾಲದಲ್ಲಿ ಹಂಪಿ ಸಾಮ್ರಾಜ್ಯ ಸ್ವರ್ಗದಂತಿತ್ತು – ಸಿ ಎಂ ಸಿದ್ದರಾಮಯ್ಯ
ಕರುನಾಡ ಬೆಳಗು ಸುದ್ದಿ
(ಗಾಯತ್ರಿ ಪೀಠ ವೇದಿಕೆ) ಹಂಪಿ,೨- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿ ಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆ ಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣದೇವರಾಯ ಕಾಲದಲ್ಲಿ ದಸರಾ ಉತ್ಸವ ಜರುಗುತ್ತಿತ್ತು. ಅದು ಮೈಸೂರಿಗೆ ವರ್ಗಾವಣೆ ಆಗಿದ್ದು ವೈಭವದಿಂದ ಜರುಗುತ್ತಿದೆ.
ಹಂಪಿ ಉತ್ಸವ ಎಂ.ಪಿ. ಪ್ರಕಾಶ ಇವರ ಕನಸಿನಂತೆ ನಡೆಯುತ್ತಾ ಬಂದಿದೆ. ಹಂಪಿ ಉತ್ಸವ ವಿಜಯ ನಗರ ವೈಭವದ ಮರುಸೃಷ್ಟಿ ಮಾಡುವ ಪ್ರಯತ್ನವಾಗಿದೆ.
ಹಂಪಿಯನ್ನ ವರ್ಣಿಸಲು ಅಸಾಧ್ಯ. ವಿಜಯ ನಗರ ಅರಸರ ಕಾಲದಲ್ಲಿ ಹಂಪಿ ಸಾಮ್ರಾಜ್ಯ ಅತ್ಯಂತ ವೈಭವ ದಿಂದ ಕೂಡಿತ್ತು. ಅದಕ್ಕೆ ಉದಾ ಹರಣೆ ರಸ್ತೆಯಲ್ಲಿ ವಜ್ರ, ವೈಢೂರ್ಯಗಳನ್ನು ಮಾರುತ್ತಿ ದ್ದರು ಎಂಬುದೇ ಇದಕ್ಕೆ ಸಾಕ್ಷಿ. ಇದನ್ನು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿ ಕೊಡುವುದೇ ಇದರ ಉದ್ದೇಶ ವಾಗಿದೆ ಎಂದರು.
ಶಾಸಕ ಹೆಚ್.ಆರ್. ಗವಿ ಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಒಳ್ಳೆ ಉತ್ಸವವಾಗಿದೆ ಬರಗಾಲ ಬಂದಿರೋದ್ರಿಂದ ಕಲಾವಿದರಿಗೆ ಒಂದು ಒಳ್ಳೆ ಅವಕಾಶವಾಗಿದೆ, ಕಲಾವಿದರು ಮೆಚ್ಚಿಕೊಂಡು ಒಳ್ಳೆಯ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ಕ್ರೀಡಾ ಮತ್ತು ಯುವಜನ ಸಬಲೀ ಕರಣ ಸಚಿವ ನಾಗೇಂದ್ರ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ, ಶಾಸಕರು ಗಳಾದ ಈ.ತುಕಾರಾಮ್, ಕಂಪ್ಲಿ ಗಣೇಶ್, ಲತಾ ಎಂಪಿ ಪ್ರಕಾಶ್, ರಾಘವೇಂದ್ರ ಹಿಟ್ನಾಳ್, ನಾರಾ ಭರತ್ ರೆಡ್ಡಿ ಸೇರಿ ಹಲವು ಪ್ರಮುಖರು, ಕಲಾವಿದರುಗಳು ಉಪ ಸ್ಥಿತರಿದ್ದರು.
