ಬಿಜೆಪಿ ಪಕ್ಷದಿಂದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,6- ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆದೇಶ, ರಾಜ್ಯದ್ಯಂತ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮವನ್ನು ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ ಮಾಡಲಾಯಿತು.
ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ ನರೇಂದ್ರ ಮೋದಿ ಕೇಂದ್ರಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಬಿಜೆಪಿ ನಾಯಕರ ಸೂಚನೆಯಂತೆ ನಾವು ಕೆಲಸ ಮಾಡಬೇಕಾಗಿದೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಗ್ರಾಮ ಮತ್ತು ಭೂತ ಮಟ್ಟದಿಂದ ಪಕ್ಷದ ಪ್ರಮುಖರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ವಹಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ. ಬಿಜೆಪಿಯನ್ನು ಗೆಲ್ಲಿಸುವುದರೊಂದಿಗೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಹೇಳಿದರು.
ಯುವ ನಾಯಕ ಮತ್ತು ಸಮಾಜ ಸೇವಕರಾದ ಸಿದ್ದಾರ್ಥ್ ಸಿಂಗ್ ಮಾತನಾಡಿ ಪಕ್ಷ ಸೋತರು ಬಿಜೆಪಿ ಕೆಲಸಗಳು ಇದ್ದೇ ಇರುತ್ತವೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಯನ್ನಾಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು ಕಾಸಟ್ಟಿ ಉಮಾಪತಿ, ಜಿಲ್ಲಾಧ್ಯಕ್ಷರು ಅಯ್ಯಳ್ಳಿ ತಿಮ್ಮಪ್ಪ ,ಜಿಲ್ಲಾ ಸಂಚಾಲಕರು ಚಂದ್ರಶೇಖರ್ ಭದ್ರವಾಡಿ, ಗ್ರಾಮ ಚಲೋ ಅಭಿಯಾನ ತಾಲೂಕು ಸಂಚಾಲಕರು ಶಂಕರ್ ಮೇಟಿ, ಸಾಲಿಸಿದ್ದಯ್ಯ ಸ್ವಾಮಿ, ನಗರಸಭೆ ಅಧ್ಯಕ್ಷರು ಲತಾ, ಕವಿತಾ, ಮಂಡಲ ಪ್ರಧಾನ ಕಾರ್ಯದರ್ಶಿ ಜೀವ ರತ್ನಂ, ಟಿಂಕರ್ ರಫಿಕ್ ಸಹ ಸಂಚಾಲಕರು, ಹೊಪುರನ್ನೂ ಸಹ ಸಂಚಾಲಕರು, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಎಲ್ಲಾ ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಇತರರಿದ್ದರು.
