
ಪೆ, ೧೦ ಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಸಮಾವೇಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೯- ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ, ಗದಗ ಮತ್ತು ಧಾರವಾಡ ಜಿಲ್ಲೆ ಗಳ ಕಾರ್ಯಕರ್ತರ ಸಮಾವೇಶ ನಾಳೆ ಶನಿವಾರ ಫೆ, 10 ರಂದು ಬೆಳಿಗ್ಗೆ 10:30 ಘಂಟೆಗೆ ಕೊಪ್ಪಳದಲ್ಲಿ ಜರುಗಲಿದೆ ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ನಗರದ ವಾಲ್ಮೀಕಿ ಭವನ್ ನಲ್ಲಿ ಜರುಗಲಿದೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯಧ್ಯಕ್ಷರು ಅಡ್ವೋಕೇಟ್ ತಾಹಿರ್ ಹುಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿಮುದ್ದಿನ್, ರಾಜ್ಯ ಕಾರ್ಯದರ್ಶಿ ಆಸೀಫ್ ಬೆಳೆಕುದ್ರಿ.
ರಾಜ್ಯ ಮಾಧ್ಯಮ ಕಾರ್ಯದರ್ಶಿ ರಿಜ್ವಾನ್ ತಾಜ್, ರಾಯಚೂರು ಜಿಲ್ಲಾ ಅಧ್ಯಕ್ಷರು ಫರಿದ್ ಉಮರಿ,ಧಾರವಾಡ ಜಿಲ್ಲಾ ಅಧ್ಯಕ್ಷರು ಅಬ್ದುಲ್ ಮಲಿಕ್, ಗದಗ ಜಿಲ್ಲಾ ಅಧ್ಯಕ್ಷರು ಜುನೈದ್ ಉಮಚ್ಗಿ,ರಾಜ್ಯ ಕಾರ್ಯದರ್ಶಿ ಶ್ರೀಮತಿ ತಲತ್ ಯಾಸ್ಮಿನ್, ರಾಜ್ಯ ಅಧ್ಯಕ್ಷೆ ಶ್ರೀಮತಿ ಸಬಿಹಾ ಪಟೇಲ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸಲೀಮಾ ಜಹಾನ್ ಸೇರಿದಂತೆ ಅನೇಕರು ಆಗಮಿಲಿಸಿದ್ದಾರೆ ಎಂದು ತಿಳಿಸಿದ್ದರು.