
ಕುಡತಿನಿಯ ಎ.ಪ್ರಿಯಾಂಕಾಗೆ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಉನ್ನತ ಶ್ರೇಣಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ಇಲ್ಲಿನ ವಿಜಯನಗರ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು, ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ಕುಡತಿನಿ ಗ್ರಾಮದ ಎ.ಪ್ರಿಯಾಂಕಾ ಅವರು ಉನ್ನತ ಶ್ರೇಣಿ ಪಡೆದಿದ್ದಾರೆ.
ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮಾಡಿರುವ ಪ್ರಿಯಾಂಕ ಅವರು ಎರಡು ವರ್ಷದ ಎಂ.ಎಸ್ಸಿ ಪದವಿಯ ಎಲ್ಲಾ ನಾಲ್ಕು ಸೆಮಿಸ್ಟರ್ಗಳಿಂದ 2400 ಅಂಕಗಳಿಗೆ 1964 ಅಂಕ ಗಳಿಸಿದ್ದಾರೆ.
ಶೇ.81.83 ಪ್ರತಿಶತ ಸಾಧನೆ ತೋರಿರುವ ಪ್ರಿಯಾಂಕ ಅವರಿಗೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಅಭಿನಂಧನೆ ಸಲ್ಲಿಸಿದ್ದಾರೆ.
ಮಗಳ ಸಾಧನೆ ಕುರಿತು ತಂದೆ ಅಕ್ಕಿ ಜಡೆಪ್ಪ ಹಾಗೂ ತಾಯಿ ರತ್ನಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ನನ್ನ ವಿದ್ಯಾಭ್ಯಾಸ ಮುಂದುವರೆಸುವ ಒತ್ತಾಸೆಗೆ ಪತಿ ಮಂಜುನಾಥ ಕೆ.ಎನ್ ಬೆಂಬಲವಾಗಿ ನಿಂತಿದ್ದಾರೆ. ತಂದೆ, ತಾಯಿ, ಪತಿ ಅವರ ಪ್ರೋತ್ಸಾಹದಿಂದಲೇ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು ಎಂದು ಪ್ರಿಯಾಂಕ ಅವರು ತಿಳಿಸಿದ್ದಾರೆ.