IMG_20240216_141317

ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದ ಬೋಗಸ್ ಬಜೆಟ್ : ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,16- ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದ ಬೋಗಸ್ ಬಜೆಟ್ ಇದಾಗಿದೆ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ್‌ ಹೇಳಿದರು.

ಗ್ಯಾರಂಟಿ ಯೋಜನೆಗಳಿಗೆ ಅನುಧಾನ ಹೊಂದಿಸಲು ಹೋಗಿ ಅಭಿವೃದ್ಧಿ ಹಿನ್ನಡೆ ಆಗಿದೆ, ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ, ಕೊಪ್ಪಳ ಏತ ನೀರಾವರಿ ಯೋಜನೆಯ ಕಗ್ಗಂಟು ಬಿಡಿಸಲು ರಾಜ್ಯ ಬಜೆಟ್ ವಿಫಲ, ಹಾಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ.

ರೈತರ ಮಕ್ಕಳಿಗೆ ಅನ್ಯಾಯ, ನಮ್ಮ ಸರ್ಕಾರ ಇದ್ದಾಗ ಅಂಜನಾದ್ರಿಯ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬಿಡುಗಡೆ ಮಾಡದೆ, ಈ ವರ್ಷದ ಬಜೆಟ್ ನಲ್ಲಿ ಮತ್ತೆ ಘೋಷಣೆ ಮಾಡಿದ್ದು ಹಾಸ್ಯಸ್ಪದ ಜಿಲ್ಲೆಯಲ್ಲಿ ಕೈಗಾರಿಕೆ ಉತ್ತೇಜನ ನೀಡುವಲ್ಲಿ ಬಜೆಟ್ ವಿಫಲವಾಗಿದೆ ಎಂದರು.

ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಈ ಬಜೆಟ್ ನಲ್ಲಿ ಹಣ ನೀಡದೆ ಇರುವುದು ದುರಂತದ ಸಂಗತಿ
ಕೊಪ್ಪಳ ಜಿಲ್ಲೆಗೆ ಜನರ ನಿರೀಕ್ಷೆ ತಕ್ಕ ಹಾಗೆ ಯೋಜನೆಗಳನ್ನು ಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!