ಅಂಜನಾದ್ರಿ ಅಭಿವೃದ್ದಿಗೆ 100 ಕೋಟಿ ಹರ್ಷದಾಯಕ ಕಲ್ಯಾಣ ಕರ್ನಾಟಕ ಅಭಿವೃದ್ದಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ,16- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೇಟನಲ್ಲಿ ಅಂಜನಾದ್ರಿ ಅಭಿವೃದ್ದಿಗಾಗಿ 100 ಕೋಟಿ ಘೋಷಣೆ ಮಾಡಿದ್ದು ಹರ್ಷದಾಯಕವಾಗಿದೆ. ಕ್ಷೇತ್ರದ ಸರ್ವರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತನೆ ಎಂದು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನರೆಡ್ಡಿ ದೂರವಾಣಿ ಮೂಲಕ ತಿಳಿಸಿದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿಗಾಗಿ ಅನುದಾನ ಘೋಷಣೆ ಮಾಡಿದ್ದು ಶ್ಯಾಘನೀಯವಾಗಿದೆ.
ಈಗಾಗಲೇ ಅಂಜನಾದ್ರಿ ಅಭಿವೃದ್ದಿಗೆ ಬಂದ 22 ಕೋಟಿಯಲ್ಲಿ ಕಾಮಗಾರಿ ಪ್ರಾರಂಭವಾಗಿದೆ. 100ಕೋಟಿಯಲ್ಲಿ ಭೂಸ್ವಾದಿನ ಕಾರ್ಯ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ 100 ಕೋಟಿಯಲ್ಲಿ ಯಾತ್ರಿ ನಿವಾಸ, ರಸ್ತೆ ಕಾರ್ಯ, ವಿವಿಧ ಅಭಿವೃದ್ದಿಗೆ ವಿನಿಯೋಗಿಸಲಾಗುವುದು.
ಸರ್ವಜನರ ಬಜೇಟ ಆಗಿದೆ. ಈಗಾಗಲೇ ಕರಡಿ ಧಾಮ ಸರ್ವೇ ಕಾರ್ಯ ಪ್ರಾರಂಭವಾಗಿದೆ. ಸರಕಾರದ ಅನುದಾನದೊಂದಿಗೆ ಕಾರ್ಖಾನೆ ಮಾಲಿಕರು ಹಾಗೂ ಇನಪೋಸಿಸ್ ಸುಧಾಮೂರ್ತಿಯವರನ್ನು ಭೇಟಿ ಮಾಡಿ ಕರಡಿ ಧಾಮ ಅಭಿವೃದ್ದಿಗಾಗಿ ಸಹಕಾರ ಕೆಳುತ್ತವೆ ಎಂದರು.
