ಜೈನಮುನಿ ವಿದ್ಯಾಸಾಗರ ಮಹಾರಾಜ್ ಜಿನೈಕ್ಯ
ಕೊಪ್ಪಳದಲ್ಲಿ ಸಂತಾಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೯- ನಗರದ ದಿಗಂಬರ ಜೈನ ಮಂದಿರದಲ್ಲಿ ದಾರ್ಶನಿಕ, ಕರ್ನಾಟಕದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಾಜದ ಜಿಲ್ಲಾಧ್ಯಕ್ಷ ಪದ್ಮಗೌಡ ಹಿರೇಗೌಡ ಮಾತನಾಡಿ, ಸ್ವಾಮೀಜಿ ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದು, 3 ದಿನಗಳ ಹಿಂದೆ ಸಲ್ಲೇಖನ ವ್ರತವನ್ನು ಕೈಗೊಂಡಿದ್ದರು. ಈ ವ್ರತದ ಪ್ರಕಾರ ಸಂಪೂರ್ಣವಾಗಿ ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಿದ್ದ ಮುನಿಗಳು ಶನಿವಾರ ತಡರಾತ್ರಿ 2.35ರ ಸುಮಾರಿಗೆ ದೇಹತ್ಯಾಗ ಮಾಡಿದರು. ಚಂದ್ರಗಿರಿ ತೀರ್ಥದಲ್ಲಿ ಕಳೆದ 6 ತಿಂಗಳಿನಿಂದ ಆಚಾರ್ಯರು ನೆಲೆಸಿದ್ದರು ಎಂದರು.
ಪಾಶ್ವ೯ನಾಥ ದಿಗಂಬರ ಜೈನ ಸೇವಾ ಟ್ರಸ್ಟ್ ಅಧ್ಯಕ್ಷ ಸುರೆಂದ್ರ ಪಾಟಿಲ್, ಕೊಪ್ಪಳ ಜೈನ ಮಿಲನ ಸಂಘದ ಅಧ್ಯಕ್ಷ ಸಾಗರ ಜೈನ,ಪದ್ಮಾವತಿ ಜೈನ, ದಿಗಂಬರ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಪಿ ರಂಗೊಳ್ಳಿ ಇತರರಿದ್ದರು.

ಕೊಪ್ಪಳದ ನಗರದ ದಿಗಂಬರ ಜೈನ ಮಂದಿರದಲ್ಲಿ ದಾರ್ಶನಿಕ, ಕರ್ನಾಟಕದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
