
ಕೊಪ್ಪಳ ಮೀಡಿಯಾ ಕ್ಲಬ್ ನಿರ್ದೇಶಕರ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,22- ಕೊಪ್ಪಳ ಮೀಡಿಯಾ ಕ್ಲಬ್ ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ( ನಿರ್ದೇಶಕ) ಪತ್ರಕರ್ತರಾದ ದೇವು ನಾಗನೂರು, ಮುಕ್ಕಣ್ಣ ಕತ್ತಿ ಹಾಗೂ ಅನಿಲ್ ಬಾಚನಹಳ್ಳಿ ಗೆಲುವು ಸಾಧಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ ನಲ್ಲಿ ನಡೆದ ಚುನಾವಣೆಯಲ್ಲಿ ಈ ಮೂವರು ಆಯ್ಕೆಯಾಗಿದ್ದಾರೆ.
ಒಟ್ಟು 35 ಸದಸ್ಯ ಬಲದ ಮೀಡಿಯಾ ಕ್ಲಬ್ ನಲ್ಲಿ ತೆರವಾದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು. ತಲಾ 21 ಮತ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
ಮೂವರು ನೂತನ ನಿರ್ದೇಶಕರಿಗೆ ಅಧ್ಯಕ್ಷ ಶರಣಪ್ಪ ಬಾಚಲಾಪೂರ, ಪ್ರಧಾನ ಕಾರ್ಯದರ್ಶಿ ರವೀಂದ್ರ ವಿ.ಕೆ ಸೇರಿ ಸರ್ವ ಸದಸ್ಯರು ಅಭಿನಂದಿಸಿದರು.