
ರಾಜ್ಯದ ನಾಲ್ಕೂ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಉಪವಾಸ ಸತ್ಯಾಗ್ರಹ
ಕರುನಾಡ ಬೆಳಗು ಸುದ್ದಿ
ವಿಜಯನಗರ,23- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹೊಸಪೇಟೆಯಿಂದ ರಾಜ್ಯದ ನಾಲ್ಕೂ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಕೇಂದ್ರ ಬಸ್ ನಿಲ್ದಾಣದಮುಂದೆ ಗುರುವಾರ “ಉಪವಾಸ ಸತ್ಯಾಗ್ರಹ” ಹಮ್ಮಿಕೊಂಡಿದ್ದರು.
ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೊಸಪೇಟೆ ವಿಭಾಗ ಇವರ ಮುಖಾಂತರ, ವ್ಯವಸ್ಥಾಪಕ ನಿರ್ದೇಶಕರು ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಛೇರಿ, ಸಾರಿಗೆ ಸದನ ಕಲಬುರಗಿ ಇವರಿಗೆ, ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಬೇಡಿಕೆಗಳು :
ಡಿ.31 ರ ಮೂಲ ವೇತನದ ಶೇ. 25ರಷ್ಟು ಹೆಚ್ಚಳ ಮಾಡಿ, ಜ. 1 ರಿಂದ ವೇತನ ಶ್ರೇಣಿಗಳನ್ನು ಸಿದ್ಧಪಡಿಸತಕ್ಕದ್ದು. (ಇನ್ನಿಮೆಂಟ್ ದರ ಎಲ್ಲಾ ಹಂತಗಳಲ್ಲೂ ಮೂಲ ವೇತನದ ಶೇ. 4 ರಷ್ಟು ಇರತಕ್ಕದ್ದು.) ಜ.1 ರಿಂದ ಆಗಿರುವ ಶೇ. 15 ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣ ವಿಳಂಬವಿಲ್ಲದೆ ಪಾವತಿಸಬೇಕು. ಜ.1 ರಿಂದ ಫೆ. 28 ರ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ವಿಮುಕ್ತಿಯಾಗಿರುವ ಎಲ್ಲಾ ನೌಕರರಿಗೆ ನಿವೃತ್ತಿ, ಮೃತಪಟ್ಟವರು, ವಜಾಗೊಂಡವರು ಹಾಗೂ ಇತರೆ ಕಾರಣಗಳಿಂದ ಸೇವೆಯಿಂದ ನಿರ್ಗಮಿಸಿರುವ ಎಲ್ಲಾ ನೌಕರರಿಗೂ ಜ,1 ರಿಂದ ಜಾರಿ ಮಾಡಿರುವ ವೇತನ ಶ್ರೇಣಿಗಳನ್ನು ಅನ್ವಯಿಸಿ, ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ಪಾವತಿಸಬೇಕು.
ನಾಲ್ಕೂ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಚರ್ಚಿಸಿ ಇತ್ಯರ್ಥಪಡಿಸಬೇಕು. ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂಧಿಗಳಿಗೆ ಮತ್ತು ಇತರ ಎಲ್ಲಾ ನೌಕರರಿಗೂ, ಹಾಲಿ ಇರುವ ಭಾಟಾ, ಮಾಸಿಕ/ ದೈನಂದಿನ (ಕ್ಯಾಪ್, ರಿಫಾಸ್ಟ್, ಬಟ್ಟೆ ತೊಳೆಯುವ ರಾತ್ರಿ ಪಾಳಿ, ಪ್ರೋತ್ಸಾಹ ಭತ್ಯೆ ಮತ್ತಿತರ ಭತ್ಯೆಗಳು) ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ. ಶೂ. ಜೆರ್ಸಿ. ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೂ ಕ್ಯಾಷಿಯರ್‌ಗಳಿಗೆ ಸಮಾನವಾದ ಕ್ಯಾಷ್ ಆಲೋವೆನ್ಸ್ ನೀಡಬೇಕು.
ಪ್ರಸ್ತುತ ವೇತನ ಪರಿಷ್ಕರಣೆಯ ದಿನಾಂಕ : 01-02-2024ರಿಂದ 31122027ವರೆಗೆ ನಾಲ್ಕು ವರ್ಷಗಳಕಾಲ ಜಾರಿಯಲ್ಲಿರತಕ್ಕದ್ದು ಎಂದು ಹಲವಾರು ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಶಿವಾನಂದ ಭಂಡಾರಿ, ಎನ್ ಇ ಕೆ ಆರ್ ಟಿ ಸಿ ಅಧ್ಯಕ್ಷ ಎಂ ವೆಂಕಟೇಶ್, ಕೆ ಎಸ್ ಆರ್ ಟಿ ಸಿ ನಾಗಪ್ಪ ಇತರರಿದ್ದರು.