
ಜೀವನದಲ್ಲಿ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕಾರ ಅತಿ ಅವಶ್ಯಕ : ಶಿವನಗೌಡ ಪೊಲೀಸ್ ಪಾಟೀಲ್
ಕರುನಾಡ ಬಡೆಳಗು ಸುದ್ದಿ
ಕುಕನೂರ,23- ತಾಲೂಕಿನ ಯೆರೇಹಂಚಿನಾಳ ಗ್ರಾಮದ ವಿನಾಯಕ ಪಬ್ಲಿಕ್ ಸ್ಕೂಲ್ ನ 11ನೇ ವರ್ಷದ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಿಳ್ಕೊಡುಗೆ ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಶಿವನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಜೀವನದಲ್ಲಿ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕಾರ ಅತಿ ಅವಶ್ಯಕವಾಗಿದೆ ಪಾಲಕರು ಮಕ್ಕಳ ಕಡೆ ಗಮನ ಹರಿಸಬೇಕು. ಸಂಸ್ಕಾರ ಮಕ್ಕಳಲ್ಲಿ ಇಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ. ದುಡ್ಡಿನ ಶಿಕ್ಷಣದ ಅವಶ್ಯಕತೆ ಇಲ್ಲ ಜ್ಞಾನ ಮತ್ತು ಸಂಸ್ಕಾರ ಅತಿ ಅವಶ್ಯಕ.
ಒಂದು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವುದು ಸುಲಭದ ಮಾತಲ್ಲ ಆಡಳಿತ ಮಂಡಳಿಯ ಶ್ರಮ ಅತಿ ಅವಶ್ಯಕ ಅವರ ಶ್ರಮದ ಫಲದಿಂದ ಶಾಲೆ ಮುನ್ನುಗ್ಗಲು ಸಾಧ್ಯ. ಒಂದು ಶಿಕ್ಷಣ ಸಂಸ್ಥೆ ಬೆಳೆಯಲು ಪಾಲಕ ಪೋಕ್ಷಕರ ಸಹಕಾರ ಅತಿ ಅವಶ್ಯಕ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು ಗವಿಸಿದ್ದೇಶ್ವರ ಶಾಖ ಮಠ ಹೂವಿನ ಹಡಗಲಿ ಪೂಜ್ಯರು ಮಾತನಾಡಿ , ಮಕ್ಕಳು ಚಿಕ್ಕವರಿರುವಾಗಲೇ ಉತ್ತಮ ಶಿಕ್ಷಣ ನೀಡಿ, ತಂದೆ ತಾಯಿ ಕುಟುಂಬ ದವರ ನಡವಳಿಕೆಯನ್ನು ಮಕ್ಕಳು ಕಲಿಯುತ್ತಾರೆ ಅದಕ್ಕಾಗಿ ಮಕ್ಕಳಿಗೆ ಸಂಸ್ಕಾರ ನೀಡಿ. ಮುಂದೊಂದು ದಿನ ದೇಶದ ಮಹಾನ್ ವ್ಯಕ್ತಿಗಳಾಗುತ್ತಾರೆ.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ವೇಷ ಭೂಷಣಗಳನ್ನು ನೋಡಿ ಮಕ್ಕಳು ಎಂತ ಚಂದ ಕಾಣುತ್ತಿದ್ದಾರೆ ಅವರನ್ನು ನೋಡುವುದೇ ಒಂದು ಚೆಂದ ಎಂದು ಜೊತೆಗೆ ಈ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಆಡಳಿತ ವರ್ಗಕ್ಕೆ ಮಕ್ಕಳಿಗೆ ಶಿಕ್ಷಕರಿಗೆ ಶುಭವಾಗಲಿ ಎಂದು ಆಶೀರ್ವಾದ ನೀಡಿದರು.
ಸುರೇಶ್ ಚೌಡ್ಕಿ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು ಕುದುರಿ ಮೋತಿ ಮತ್ತು ಶಿವನಗೌಡ ಪೊಲೀಸ್ ಪಾಟೀಲ್ ಉಪನ್ಯಾಸಕರು ಕೊಪ್ಪಳ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮತ್ತು ಮುದ್ದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅಭೂತ ಪೂರ್ಣವಾಗಿ ಜರುಗಿದು.
ಈ ಸಂದರ್ಭದಲ್ಲಿ ಶ್ರೀ ಸಿದ್ದಯ್ಯ ಹಿರೇಮಠ್, ರಾಜಶೇಖರ್ ಕಟ್ಟಿ ಅಧ್ಯಕ್ಷರು ವಿನಾಯಕ ಶಿಕ್ಷಣ ಸಂಸ್ಥೆ, ಹನುಮಂತಪ್ಪ ಹಣಸಿ ಕಾರ್ಯದರ್ಶಿಗಳು, ಅಂದಪ್ಪ ರುದ್ರಪ್ಪ ಕೋಳೂರು, ಶರಣಯ್ಯ ವಿರಯ್ಯ ಹಿರೇಮಠ್, ನಿಂಗಪ್ಪ ಕೋಳೂರು, ರಾಮಣ್ಣ ವಡ್ಡರ್, ಪರಮೇಶಪ್ಪ ಹಣಸಿ, ವೀರಣ್ಣ ಚಿತವಾಡಗಿ, ವಿದ್ಯಾರ್ಥಿಗಳ ಪಾಲಕರು, ವಿನಾಯಕ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದದವರು, ಗ್ರಾಮದ ಗುರುಹಿರಿಯರು, ಈ ಒಂದು ಕಾರ್ಯಕ್ರಮದ ಕೇಂದ್ರ ಬಿಂದುಗಳು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.