
ಕೊಟ್ಟ ಮಾತಿನಂತೆ ಅಂಜನಾದ್ರಿಯಲ್ಲಿ ರೋಪ್ ವೇ : ಸಂಗಣ್ಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,23- ಅಂಜನಾದ್ರಿಯಲ್ಲಿ ಕೇಂದ್ರ ಸರ್ಕಾರವೇ ರೋಪ್ ವೇ ನಿರ್ಮಿಸಲಿದ್ದು, ಕೇಂದ್ರ ಸರ್ಕಾರ ಕೊಟ್ಟ ಭರವಸೆ ಈಡೇರಿಸಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಇತ್ತೀಚಿಗೆ ಜಿಲ್ಲೆಯಿಂದ ಬಿಜೆಪಿ ಮುಖಂಡರ ಜತೆ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಂಜನಾದ್ರಿ ಯಲ್ಲಿ ರೋಪ್ ವೇ ನಿರ್ಮಾಣದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಂದು ಸಚಿವರು ಭರವಸೆ ನೀಡಿದ್ದರು. ಅದರಂತೆ ನಿತಿನ್ ಗಡ್ಕರಿ ಅವರು ಘೋಷಿಸಿದ್ದಾರೆ. ಜಿಲ್ಲೆಯ ಜನತೆ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ಅಯೋಧ್ಯೆಯಂತೆ ಅಂಜನಾದ್ರಿ ಅಭಿವೃದ್ಧಿ ಪಡಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಲೋಕಸಭಾ ಚುನಾವಣೆ ಬಳಿಕ ಅಂಜನಾದ್ರಿ ಅಭಿವೃದ್ಧಿ ಗೆ ಅನುದಾನ ನೀಡುವುದಾಗಿ ಬಿಜೆಪಿ ಹಿರಿಯ ನಾಯಕರು ಭರವಸೆ ನೀಡಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ರಚನೆಯಾಗಲಿದ್ದು, ಕೊಟ್ಟ ಮಾತಿನಂತೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಅಳವಡಿಸಲಾಗಿದೆ. ಕ್ಷೇತ್ರಾದ್ಯಂತ ರೈಲು ಸಂಚಾರ, ಹೆದ್ದಾರಿ ನಿರ್ಮಾಣ ನಮ್ಮ ಕಾಲದಲ್ಲಿ ಆಗಿದೆ. ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಯಾವ ಕಾಲದಲ್ಲೂ ಆಗಿಲ್ಲ ಎಂದರು.