
ಶ್ರೀ ಕಾಶಿ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,24- ನಗರದ ಬಾಡದ ಗೋಪಾಲ ಶೆಟ್ಟಿ ಅವರು ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ 1603 ಕಿಲೋ ಮೀಟರ್ ದೂರದ ವಾರಣಾಸಿ ಕ್ಷೇತ್ರಕ್ಕೆ ಪಾದಯಾತ್ರೆ ಪ್ರಾರಂಭಿಸಿದರು.
ಆರ್ಯವೈಶ್ಯ ಮಂಡಳಿ ಪ್ರಪಂಚ ಆರ್ಯ ವೈಶ್ಯ ಮಹಾಸಭಾ ಮತ್ತು ಆರ್ಯ ವೈಶ್ಯ ಹಿರಿಯ ನಾಗರಿಕರ ಕೇಂದ್ರ ಆರ್ಯ ವೈಶ್ಯ ಬಂಧುಗಳು ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಯು ಸಿ ರಾಮಾಂಜನೇಯ ಶೆಟ್ಟಿ, ಕೆ ಅಮಿತ್ ರಾಘವೇಂದ್ರ ಶೆಟ್ಟಿ, ಹೆಚ್ ಜೆ ಹನುಮಂತಯ್ಯ ಶೆಟ್ಟಿ, ಬಾದಾಮಿ ಜಯರಾಮ ಶೆಟ್ಟಿ, ಭಾದ್ಮಿ ದೇವೇಂದ್ರಪ್ಪ ಶೆಟ್ಟಿ, ಆರ್ಯವೈಶ್ಯ ಸಮಾಜದ ಬಂಧುಗಳು ಇದ್ದರು.