f96c3cea-2f42-4f3a-841c-9b63d9350a05

 ಭಾರತ ಹುಣ್ಣಿಮೆ  : ಬಿರು ಬಿಸಲಲ್ಲಿ ಪರದಾಡಿದ ಶ್ರೀ ಹುಲಗೇಮ್ಮ ದೇವಿಯ  ಲಕ್ಷಾಂತರ ಭಕ್ತರು

ಕರುನಾಡ ಬೆಳಗು ಸುದ್ದಿ

ಸಂತೋಷ ದೇಶಪಾಂಡೆ

ಕೊಪ್ಪಳ, ೨೫- ರಾಜ್ಯದ ಪ್ರಸಿದ್ದ ಹಾಗೂ ಐತಿಹಾಸಿಕ ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಾರತ ಹುಣ್ಣಿಮೆಯ ಅಂಗವಾಗಿ ಶನಿವಾರ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿ ಕನಿಷ್ಠ ಮೂಲಭೂತ ಸೌಲಭ್ಯ ವದಗಿಸಿದ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದರು.

ಶನಿವಾರ ಭಾರತ ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಬರುವ ನಿರಿಕ್ಷೆ ಇದ್ದರು ಸಹ ಜಿಲ್ಲಾಡಲಿತ ಒಂದು ಪೂರ್ವಸಿದ್ಧತಾ ಸಭೆ ನಡೆಸದೆ ಭಕ್ತರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸದೇ ನಿರ್ಲಕ್ಷ ತೋರಿರುವುದು ನಾಡಿನ ಲಕ್ಷಾಂತರ ಭಕ್ತರ ಆಕ್ರೋಷಕ್ಕೆ ಕಾರಣವಾಗಿದೆ.

ಪೂಣ್ಯ ಸ್ನಾಲಕ್ಕೆ ನೀರಿಲ್ಲಾ: ನದಿಯಲ್ಲಿ ನೀರಿನ ಕೊರತಯಿಂದಾಗಿ ಕೊಳಚೆ ನೀರಿನಲ್ಲಿಯೇ ಭಕ್ತರು ಪುಣ್ಯಸ್ನಾನ ಮಾಡಿದರು, ಜಿಲ್ಲಾಡಳಿತ ಆಗಮಿಸುವ ಸಾರ್ವಜನಿಕರು ಸ್ನಾನಕ್ಕು ಸಹ ನೀರಿನ ವ್ಯವಸ್ಥೆ ಮಾಡಿಲ್ಲಾ ಶನಿವಾರ ಬೆಳಗ್ಗೆಯಿಂದಲೇ ಭಕ್ತರು ತುಂಗಭದ್ರಾ ನದಿಯ ನಿಂತ ನೀರಲ್ಲೆ ಪುಣ್ಯ ಸ್ನಾನ ಮುಗಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಭಕ್ತರು ದೇವಸ್ಥಾನದ ಆವರಣದಲ್ಲಿ ಟೆಂಟ್ ಹಾಕಿಕೊಂಡು ಕರಿಗಡಬು, ಹೋಳಿಗೆ ಇನ್ನೂ ಕೆಲವರು ಮಾಂಸದ ಅಡುಗೆ ಸಿದ್ಧಪಡಿಸಿ ದೇವಿಗೆ ನೈವೇದ್ಯ ಸಮರ್ಪಿಸಿ ಊಟ ಮಾಡಿದರು. ಕೆಲವು ಭಕ್ತರು ಮನೆಯಿಂದ ತಂದ ಬುತ್ತಿಯನ್ನು ಕುಟುಂಬ ಸಮೇತ ಸವಿದರು. ದೇವಸ್ಥಾನದ ವತಿಯಿಂದ ಕೂಡ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

 ನೀರಿಗೆ ಪರದಾಡಿದ ಭಕ್ತರು : ತುಂಗಭದ್ರಾ ನದಿ ನೀರಿಲ್ಲದೆ ಖಾಲಿ ಖಾಲಿಯಾಗಿತ್ತು. ನದಿ ನೀರು ಕಲುಷಿತವಾಗಿದೆ ನೀರು ಬಳಕೆಯನ್ನು ಮಾಡಬೇಡಿ ಎಂಬ ದೇವಸ್ಥಾನದ ಎಚ್ಚರಿಕೆಯ ಬ್ಯಾನರ್ ಹಾಕಿ ಕೈ ತೊಳೆದು ಕೊಂಡಿದೆ, ಬರುವ ಭಕ್ತರು ಸ್ನಾನಕ್ಕೆ ಜಿಲ್ಲಾಡಳಿತವಾಗಲಿ ,ದೇವಸ್ಥಾನ ಸಮಿತಿಯಾಗಲಿ ಯಾವ ವ್ಯವಸ್ಥೆಯನ್ನು ಮಾಡಿಲ್ಲಾ.

ದೇವಸ್ಥಾನದಿಂದ ಕೂಗಳತೆ ದೂರದಲ್ಲಿಯೇ ತುಂಗಭದ್ರಾ ಜಲಾಶಯವಿದೆ. ಆದ್ರೆ ಈ ಬಾರಿ ಬರಗಾಲದಿಂದಾಗಿ ಜಲಾಶಯ ಕೂಡಾ ಬೇಸಿಗೆ ಮೊದಲೇ ಭತ್ತುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನದಿಗೆ ಬಿಡ್ತಿದ್ದ ನೀರನ್ನು ಬಂದ್ ಮಾಡಲಾಗಿದೆ. ನದಿಯಲ್ಲಿ ನೀರು ಇಲ್ಲದೇ ಇರೋದರಿಂದ ಭಕ್ತರು ಸ್ನಾನಕ್ಕಾಗಿ ಪರದಾಡುತ್ತಿದ್ದಾರೆ. ಹೌದು ತುಂಗಭದ್ರಾ ನದಿಗುಂಟಾ ಅನೇಕ ಕಡೆ ಸುತ್ತಾಡುತ್ತಿರುವ ಭಕ್ತರು, ಇರೋ ಅಲ್ಪಸ್ವಲ್ಪ ಗಲೀಜು ನೀರಲ್ಲಿಯೇ ಸ್ನಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಕಾರಣ ದೇವಸ್ಥಾನದ ವತಿಯಿಂದ 10-12 ಟ್ಯಾಂಕರ್ ಗಳ ಮೂಲಕ ಭಕ್ತರ ಬಳಕೆಗೆ ನೀರನ್ ವ್ಯವಸ್ಥೆ ಮಾಡಿದ್ದರಾದರು ಸಹ ಸೇರಿದ್ದ ಲಕ್ಷಾಂತರ ಭಕ್ತರಿಗೆ ಸಾಕಾಗಲಿಲ್ಲ ಪ್ರತಿ ಹುಣ್ಣಿಮೆ ಲಕ್ಷಾಂತರ ಬಕ್ತರಿಗೆ ಸೂಕ್ತ ವ್ಯವಸ್ಥೆ ಮಾಡದೆ ಜಿಲ್ಲಾಡಳಿತ ಹಾಗೂ ಆಡಳಿತಾದೀಕಾರಿಗಳು ನಿರ್ಲಕ್ಷ್ಯ ತೊರುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ, ಇನ್ನಾದರು ಜಿಲ್ಲಾಡಳಿತ ಗಮನ ಹರಿಸುವುದೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!