WhatsApp Image 2024-02-25 at 2.44.35 PM

ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 25- ಭಾರತ ಹುಣ್ಣಿಮೆ ನಿಮಿತ್ಯ ಪಟ್ಟಣದ 1ನೇ ವಾರ್ಡಿನಲ್ಲಿ ಇರುವ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಿಂದ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಶ್ರೀ ರೇಣುಕಾದೇವಿ ಮೂರ್ತಿಗೆ ವಿವಿಧ ರೀತಿಯ ಪೂಜೆ ಅಭಿಷೇಕ ವಿಧಿ ವಿಧಾನಗಳಿಂದ ನಡೆಯಿತು ನಂತರ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡದವು ನಂತರ ವಿವಿಧ ಸಕಲ ವಾದ್ಯ ಮೇಳಗಳೊಂದಿಗೆ ರೇಣುಕಾದೇವಿ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ರಾಜ ಬೀದಿಗಳ ಮುಖಾಂತರ ಬಸವಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜಾ ಸಲ್ಲಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಅಂದಯ್ಯ ಕಳ್ಳಿಮಠ ಮಾತನಾಡಿ ಪ್ರತಿಯೊಬ್ಬರು ದಾನ ಧರ್ಮ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚು ಭಾಗವಹಿಸುವ ಮುಖಾಂತರ ತಾಯಿಯ ಕೈುಪೆಗೆ ಪಾತ್ರರಾಗಬೇಕು ಸವದತ್ತಿ ಏಳುಕೊಳ್ಳದ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನವು ಜಾಗೃತ ಕೇಂದ್ರವಾಗಿದೆ ಭಕ್ತರು ಕಷ್ಟಅಂತ ಬಂದವರಿಗೆ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಕ್ಷೇತ್ರವಾಗಿದೆ ಏಳುಕೊಳ್ಳದ ಎಲ್ಲಮ್ಮ ದೇವಿ ಎಂದು ಹೆಸರು ಪಡೆದ ಪ್ರಾಚೀನ ಕಾಲದ ಇತಿಹಾಸವಿದೆ ದೇಶದ ಮತ್ತು ರಾಜ್ಯದ ಎಲ್ಲಾ ಕಡೇಯಿಂದ ಭಕ್ತರು ಸವದತ್ತಿ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿಯ ದರ್ಶನ ಆಶೀರ್ವಾದ ಪಡೆದುಕೊಳ್ಳುವರು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ವಸಂತ ಬಾವಿಮನಿ, ಹನುಮಂತಪ್ಪ ಭಜಂತ್ರಿ, ರಿಯಾಜ್ ಖಾಜಿ ಕಲಾವತಿ ಮರದಡ್ಡಿ ಮಾತನಾಡಿ ಪ್ರತಿಯೊಬ್ಬರು ತನು ಮನದಿಂದ ಧಾರ್ಮಿಕ ಸಾಂಸ್ಕೃತಿಕ ಸಮಾಜಮುಖಿ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದಾಗ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ತಾಯಿಯಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ತಾಯಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾಳೆ ಅಂತಹ ಜಾಗೃತ ಸ್ಥಳವಾಗಿದೆ ಅದರಲ್ಲಿ ಕೂಡ ಇಲ್ಲಿರುವ ರೇಣುಕಾದೇವಿ ದೇವಸ್ಥಾನಕ್ಕೆ ಅಪಾರ ಭಕ್ತರು ಬರುವವರು ಎಂದು ಹೇಳಿದರು.

ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ ಮುಖಂಡ ಮಲ್ಲಪ್ಪ ಸುರಕೊಡ, ಈರಪ್ಪ ಬಣಕಾರ, ರಮೇಶ ಬೇಲೇರಿ, ಗವಿಸಿದ್ದಯ್ಯ ಗವಿಮಠ, ಕಳಕಯ್ಯ ಶಿವಪ್ಪಯ್ಯನ ಮಠ, ಪಾಷುಸಾಬ ಕನಕಗಿರಿ, ಕಲ್ಲಪ್ಪ ಕರಮುಡಿ, ವಿಜಯ, ಶರಣಪ್ಪ, ಬಸವರಾಜ, ರಾಜಶೇಖರ, ಚಂದ್ರು ಮರದಡ್ಡಿ, ರಮೇಶ್ ಮುಧೋಳ, ಪುಟ್ಟಪ್ಪ ಕಮ್ಮಾರ್, ಉಮೇಶ್ ಚಿಂಪರ, ಶಿವಪ್ಪ ಕುರಿ, ಅಮರೇಶ ಸಂಕನೂರ, ಶರಣಪ್ಪ ಕುಂಬಾರ, ಮುತ್ತಪ್ಪ ನೆರೆಗಲ್, ಸಂಗಪ್ಪ ಇಮಾಮತಿ, ವೀರೇಶ್ ಬಳಿಗೇರಿ, ಪ್ರದೀಪಕುಮಾರ ಕೆ, ಮೈಲಾರಿ ವಾಲ್ಮೀಕಿ ಮತ್ತು ಇತರ ಇದ್ದರು.

Leave a Reply

Your email address will not be published. Required fields are marked *

error: Content is protected !!