
ಜಿಲ್ಲೆಯಾದ್ಯಂತ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆಗಾಗಿ ಶ್ರೇಮಿಸುವೆ : ಅರವಿಂದಗೌಡ ಎಸ್ ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,1- ರಾಜ್ಯದ ಮತ್ತು ಜಿಲ್ಲೆಯ ಹಿರಿಯ ನಾಯಕರೊಂದಿಗೆ ಸೇರಿ ಕೊಪ್ಪಳ ಜಿಲ್ಲೆಯ್ಯಾದಂತೆ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರೇಮಿಸುತ್ತೇನೆ. ಎಂದು ಕೊಪ್ಪಳ ಜಿಲ್ಲೆಯ ನ್ಯೂತನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರವಿಂದಗೌಡ ಎಸ್ ಪಾಟೀಲ ಹೇಳಿದರು.
ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಬಿಜೆಪಿ ಕಾಯ೯ಕತ೯ರು ಎಲ್ಲರೂ ಸೇರಿ ನ್ಯೂತನ ಜಿಲ್ಲಾ ಉಪಾಧ್ಯಕ್ಷ ಅವರನ್ನು ಸನ್ಮಾಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಅವರು ನೀವು ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ನನ್ನಗೆ ಈ ಸ್ಥಾನ ನೀಡಿದಿರಿ ಪಕ್ಷದ ಎಲ್ಲಾ ಹಿರಿಯರಿಗೂ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೂ ನನ್ನ ಕೃತಜ್ಞತೆಗಳು .ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ದೇಶದ ಸಮಗ್ರ ಅಭಿವೃದ್ಧಿ ಮಾಡುವದರ ಜೊತೆಗೆ ಸಣ್ಣ ಹಿಡುವಳಿ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ 6 ಸಾವಿರ ರೂಪಾಯಿ ನೇರವಾಗಿ ರೈತರ ಖಾತೆಗೆ ಜಮ್ಮಾಆಗುತ್ತದೆ ಈ ಹಿಂದೆ ದೇಶದಲ್ಲಿ ಮಹಾಮಾರಿ ಕರೋನ ಬಂದಂತಹ ಸಂದರ್ಭದಲ್ಲಿ ಪ್ರಧಾನಿಯವರು ದಿಟ್ಟ ನಿರ್ಧಾರ ತಗದುಕೂಂಡು ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಕರೋನಾ ಲಸಿಕೆಯನ್ನು ನೀಡಿ ದೇಶದ 130 ಕೋಟಿ ಜನರ ಜೀವ ರಕ್ಷಣೆ ಮಾಡಿದ ನಂಬರ 1 ಪ್ರಧಾನಿ ಮತ್ತು ಧೀಮಂತ ನಾಯಕ ಇಡೀ ಪ್ರಪಂಚವೇ ನಮ್ಮ ದೇಶದ ಕಡೇ ತಿರುಗಿ ನೋಡುವಂತೆ ಮಾಡಿದವರು ಅವರ ದಕ್ಷತೆ.ಬಡವರ ಬಗ್ಗೆ ಕಾಳಜಿ. ಪ್ರಮಾಣಿಕ ಆಡಳಿತ ನೋಡಿ ಇಡೀ ವಿಶ್ವವೇ ಮೆಚ್ಚಿಕೊಂಡು ವಿಶ್ವದ ಹಿರಿಯ ಅಣ್ಣ ಎನ್ನುತ್ತಾರೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಜನ ಮೆಚ್ಚಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಈ ನಿಟ್ಟಿನಲ್ಲಿ ನ್ಯೂತನ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ.ವಿಜೇಯಂದ್ರ ಅವರು ನೇತೃತ್ವದಲ್ಲಿ ಬಿಜೆಪಿ ಪಕ್ಷವು ಮತ್ತಷ್ಟು ಬಲಿಷ್ಠ ವಾಗುತ್ತದೆ ಅದೇ ರೀತಿ ಕೊಪ್ಪಳ ಜಿಲ್ಲೆಯ ನ್ಯೂತನ ಜಿಲ್ಲಾಧ್ಯಕ್ಷ ನವೀನಕುಮಾರ ಗುಳ್ಳಗಣ್ಣನವರು ಯುವಕರು ಜಿಲ್ಲೆಯಲ್ಲಿ ಸಾಕಷ್ಟು ಪಕ್ಷದ ಸಂಘಟನೆಗಾಗಿ ಶ್ರೇಮಿಸಿದ್ದಾರೆ ಅವರ ನೇತೃತ್ವದಲ್ಲಿ ನನ್ನನ್ನು ಜಿಲ್ಲಾ ಘಟಕಕ್ಕೆ ಉಪಾಧ್ಯಕ್ಷ ಮಾಡಿರುವುದು ನಿಜಕ್ಕೂ ನನ್ನಗೆ ಸಂತಸ ತಂದಿದೆ. ಪಕ್ಷಕೋಸ್ಕರ ಪ್ರಮಾಣಿಕವಾಗಿ ದುಡಿಯುವದರ ಜೊತೆಗೆ ಪಕ್ಷ ಸಂಘಟನೆಮಾಡಿ ಬಲಿಷ್ಠಗೋಳಿಸುವಲ್ಲಿ ಶ್ರೇಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಅಯ್ಯನಗೌಡ ಕೆಂಚಮ್ಮನವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು. ಮುಖಂಡರು. ಕಾರ್ಯಕರ್ತರು. ಅರವಿಂದಗೌಡ್ರ ಅಭಿಮಾನಿಗಳು ಮತ್ತು ಇತರರು ಭಾಗವಹಿಸಿದರು