
ಮೇಜರ್ ಡಾ. ದಯಾನಂದ ಸಾಳುಂಕೆರವರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಎನ್.ಸಿ.ಸಿ ಅಧಿಕಾರಿಗಳಾದ ಡಾ.ದಯಾನಂದ ಸಾಳುಂಕೆರವರು ಕ್ಯಾಪ್ಟನ್ ರ‍್ಯಾಂಕ್‌ನಿಂದ ಮೇಜರ್ ರ‍್ಯಾಂಕ್‌ಗೆೆ ಬಡ್ತಿ ಪಡೆದ ನಿಮಿತ್ಯವಾಗಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯರಾದ ಡಾ. ಚನ್ನಬಸವರವರು ಮಾತನಡುತ್ತಾ ಕಳೆದ ೧೫ ವರ್ಷಗಳಿಂದ ಡಾ. ದಯಾನಂದ ಸಾಳುಂಕೆಯವರು ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದು ಅವಿಸ್ಮರ್ಣೀಯ. ಮಹಾವಿದ್ಯಾಲಯದ ರಾಷ್ಟಿçಯ ದಿನಾಚರಣೆಗಳು, ಪಲ್ಸ್ ಪೋಲಿಯೋ, ಕರೋನ ಜಾಗೃತಿ ಅಭಿಯಾನ, ರಕ್ತದಾನ ಜಾಗೃತಿಯಂತಹ ಸಮಾಜಿಕ ಜಾಗೃತಿ ಕಾರ್ಯಗಳಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳ ಮತ್ತು ಅಧಿಕಾರಿ ಡಾ. ದಯಾನಂದ ಸಾಳುಂಕೆಯವರ ಸೇವೆ ಅಪರವಾದ್ದು ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪಿಯುಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ವಿರೇಶಕುಮಾರ, ಪ್ರಾಧ್ಯಾಪಕರುಗಳಾದ ಡಾ.ಬಸವರಾಜ ಪೂಜಾರ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ಕರಿಬಸವ, ಡಾ. ಪ್ರಶಾಂತ ಕೊಂಕಲ್, ಡಾ. ಸುಂದರ ಮೇಟಿ, ಡಾ. ಅರುಣಕುಮಾರ ಎ.ಜಿ, ಮಹೇಶ ಬಿರಾದರ, ವಿನೋದಕುಮಾರ ಮುದಿಬಸನಗೌಡ ಮತ್ತು ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಅಭಿನಂದಿಸಿದರು.