ಹೆಚ್ಚು ಮಹಿಳೆಯರು ಮೋದಿ ಪರಿವಾರ: ಮಂಜುಳಾ ಕರಡಿ
ಕೊಪ್ಪಳ, 06- ದೇಶದ ಎಲ್ಲ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿವಾರ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಕರಡಿ ಹೇಳಿದರು.
ಅವರು ನಗರದ ಪಾನ್ ಘಂಟಿ ಕಲ್ಯಾಣ ಮಂಟಪದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾರಿಶಕ್ತಿ ವಂದನ ಸಮಾರೋಪ ಕಾರ್ಯಕ್ರಮ ಲೈವ್ ಮೂಲಕ ನಡೆದ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹಿಳಾ ಪರ ನಿಲುವು ಹೊಂದಿದ್ದಾರೆ. ಕಟ್ಟಿಗೆಯಿಂದ ಅಡುಗೆ ಮಾಡುವ ಮೂಲಕ ಹೊಗೆಯನ್ನು ಮಹಿಳೆ ಸೇವಿಸಿ ಅತಿ ಕಡಿಮೆ ಅವಧಿಯಲ್ಲಿ ಮೃತಪಡುತ್ತಿದ್ದಳು. ಇದನ್ನು ಕಂಡ ಪ್ರಧಾನಮಂತ್ರಿ ಗಳು ಉಜ್ವಲ ಯೋಜನೆ ಯಡಿ ಉಚಿತ ಗ್ಯಾಸ್ ಹಾಗೂ ಸಿಲಿಂಡರ್ ನೀಡಿದರು. ದೂರದ ಊರುಗಳಿಂದ ಮಹಿಳೆಯರು ಕುಡಿಯುವ ನೀರು ತರುವುದನ್ನು ಗಮನಿಸಿ ಹರ್ ಘರ್ ಜಲ್ ಯೋಜನೆ ಯಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ ಎಂದರು.
ಇನ್ನು ಮಹಿಳೆಯರು ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಮಾತ್ರ ಮಹಿಳಾ ಮೀಸಲಾತಿ ಇತ್ತು. ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ನೀಡಿದ್ದಾರೆ. ದೇಶದ ಆರ್ಥಿಕತೆ ನಿಭಾಯಿಸುವ ಹೊಣೆ ಹೆಣ್ಣು ಹೊತ್ತಿದ್ದಾಳೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳಾ ಪರ ನಿಲುವಿಗೆ ನಾವೆಲ್ಲರೂ ಪ್ರಧಾನಿಗಳನ್ನೇ ಬೆಂಬಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ ಪ್ರಭಾರಿ ಚಂದ್ರಶೇಖರ ಗೌಡ ಪಾಟೀಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಹೇಸರೂರು,ನಗರ ಮಂಡಲ ಅಧ್ಯಕ್ಷರಾದ ರಮೇಶ ಕವಲೂರು,
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶೀ ಕೀರ್ತಿ ಪಾಟೀಲ್,ಗೀತಾ ಪಾಟೀಲ್,ವಾಣಿಶ್ರೀ ಮಠದ,ಸೇರಿದಂತೆ ಅನೇಕ ಮಹಿಳಾ ಮುಖಂಡರು ಉಪಸ್ಥಿತರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಎಲ್ಲ ಮಹಿಳೆಯರು ಬೆಂಬಲಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 400 ಕ್ಕೂ ಅಧಿಕ ಸ್ಥಾನ ಪಡೆದು ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
– ವೈ ಎಮ್ ಸತೀಶ್,
ವಿಧಾನ ಪರಿಷತ್ ಸದ್ಯಸ.
