IMG-20240315-WA0018

ಗ್ರಾಹಕರು ಕೃತಕಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಬೇಕು : ದೇವೇಂದ್ರ ಪಂಡಿತ

ಕರುನಾಡ ಬೆಳಗು ಸುದ್ದಿ
ಕುಕನರ  15- ಗ್ರಾಹಕರು ಮೋಬೈಲ್ ನಲ್ಲಿ ಅನ್ ಲೈನ್ ಮುಖಾಂತರ ನಡೆಸುವ ಹಣಕಾಸಿನ ವ್ಯವಹಾರಕ್ಕಾಗಿ ಬಳಸುವ ಕೃತಕಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾದೀಶ ದೇವೇಂದ್ರ ಪಂಡಿತ್ ಅವರು ಹೇಳಿದರು.
ಅವರು ಇಂದು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಗ್ರಾಹಕರು ತಮ್ಮ ವೈಯಕ್ತಿಕ ಖಾತೆಯ ನಂಬರ್ ನ್ನು ಅಥವಾ ಖಾತೆಯ ವಿವರಗಳನ್ನು ಬಿಟ್ಟುಕೊಡಬಾರದು, ಮೊಬೈಲ್ ಮೂಲಕ ಆನ್ ಲೈನ್ ಹಣ ವರ್ಗಾವಣೆ ಸಂದರ್ಭಗಳಲ್ಲಿ ಜಾಗೃತಿ ವಹಿಸಬೇಕು.

        ಗ್ರಾಹಕರು ಕೊಂಡ ವಸ್ತುಗಳು ಕಳಪೆ ಮಟ್ಟದ್ದಾಗಿದ್ದಲ್ಲಿ, ಅದರಿಂದ ಮೊಸ ಹೋದಲ್ಲಿ ಅಥವಾ ವಹಿಕಲ್ ಇನ್ಸೂರೆನ್ಸ್ ಕಂಪನಿಯಿಂದ ಯಾವ ರೀತಿ ಪರಿಹಾರ ಪಡೆಯಬೇಕು ಎಂಬುದಕ್ಕೆ ಸೂಕ್ತವಾದ ಕಾನೂನಾತ್ಮಕ ಉತ್ತರಗಳನ್ನು ನೀಡಿದರು.
ನ್ಯಾಯವಾದಿ ಮತ್ತು ಮುಜುಮದಾರ ಫೌಂಡೇಶನ್ ನ ಸಂಚಾಲಕಿ ಸಾವಿತ್ರಿ ಮುಜುಮದಾರ್ ಮಾತನಾಡಿ ಎ.ಐ ಅಥವಾ ಕೃತಕ ಬುದ್ಧಿಮತ್ತೆಯು ಕೆಲವು ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವ ಹಿಸುವುದಿಲ್ಲ ಅವುಗಳಿಂದ ಅನುಕೂಲಗಳಿಗಿಂತ ಅನಾನುಕೂಲಗಳತೆಗಳೇ ಹೆಚ್ಚಾಗಿವೆ ಆದ್ದರಿಂದ ಅವುಗಳಿಂದ ಸರಿಯಾದ ಉತ್ತರ ನಿರೀಕ್ಷಸಲಾಗುವುದಿಲ್ಲ‌‌. ಇಂದು ಸಿದ್ಧ ಮಾದರಿಯ ಧ್ವನಿಗಳಿಂದ ಸಿಗುವ ಮಾಹಿತಿ ಅಪೂರ್ಣವಾಗಿರುತ್ತದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೋರಾಟ ಆರಂಭವಾಗಿದೆ. ಆದ್ದರಿಂದ ಗ್ರಾಹಕರು ಜವಾಬ್ದಾರಿಯುತವಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಬೇಕು.
ಬಳಕೆದಾರ ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಆ ವಸ್ತುವಿನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ ಮತ್ತು ಇತರೆ ಅಡುಗೆ ಪದಾರ್ಥಗಳಲ್ಲಿ ಬಣ್ಣ ಬೆರೆಸುವುದನ್ನು ನಿಷೇಧಿಸಲಾಗಿದ್ದು, ಇದರ ಬಳಕೆ ಕಂಡು ಬಂದಲ್ಲಿ ಗ್ರಾಹಕರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ನ್ಯಾಯ ಪಡೆಯಬಹುದು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜಿ.ಇ.ಸೌಭಾಗ್ಯಲಕ್ಷ್ಮೀ ಮಾತನಾಡಿ ಮನುಷ್ಯ ಹುಟ್ಟಿನಿಂದ ಸಾಯುವರಿಗೆ ಗ್ರಾಹಕನಾಗಿಯೇ ಇರುತ್ತಾನೆ. ಗ್ರಾಹಕ ಮೊಸ ಹೋದಾಗ ಅವನು 35 ನೇ ಸೆಕ್ಷನ್ ಅಡಿಯಲ್ಲಿ ಜಿಲ್ಲಾ ಗ್ರಾಹಕ ಕೇಂದ್ರದ ಕೋರ್ಟ್ ನಲ್ಲಿ ಐದರಿಂದ ಐವತ್ತು ಲಕ್ಷದವರೆಗೆ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಜಿಲ್ಲಾ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜಿ. ಮಾಲ್ದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಕಾನೂನು ಪರಿಹಾರಗಳನ್ನು ಮತ್ತು ಸಲಹೆಗಳನ್ನು ನೀಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ವಿ ಪ್ರಸಾದ್ ಅವರು ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಣಿತರಿಂದ ಮಾರ್ಗದರ್ಶನ ಮತ್ತು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಮೂಲಕ ಪ್ರಾಯೋಗಿಕ ಕಲಿಕೆಯ ಸಾಧ್ಯತೆಗಳನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾನೂನು ಸಹಾಯಕ ಇಲಾಖೆ, ಸಹಾಯಕ ನಿಯಂತ್ರಕ, ಸಹಾಯಕ ನಿರ್ದೇಶಕರು ಆಹಾರ ಇಲಾಖೆ ಹಾಗೂ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ನ್ಯಾಯಬೆಲೆ ಅಂಗಡಿ ಮಾಲೀಕರು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!