ಕೊಪ್ಪಳ ಮಾ, 18 ರಂದು ವಿಕಾಸ ಬ್ಯಾಂಕ್ ಕೊಪ್ಪಳ ಶಾಖೆ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,16- ಹೊಸಪೇಟೆಯ ವಿಕಾಸ ಸೌರ್ಹಾದ ಕೋ-ಆಪರೇಟಿವ್ ಬ್ಯಾಂಕ್ ನ ” ವಿಕಾಸ ಬ್ಯಾಂಕ್” ತನ್ನ 14 ನೇ ಶಾಖೆಯ ಮೂಲಕ ಕೊಪ್ಪಳ ದಲ್ಲಿ ಇದೇ ಮಾರ್ಚ 18 ರಂದು ಸೋಮವಾರ ಬೆಳಿಗ್ಗೆ 9:30 ಉದ್ಘಾಟನೆ ಗೋಳಲ್ಲಿದೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ ಹಿರೇಮಠ ಹೇಳಿದರು.
ಅವರು ಶನಿವಾರದಂದು ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಜರುಗಿದೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೊಪ್ಪಳದ ಗಂಜ್ ಸರ್ಕಲ್ ಹತ್ತಿರ ಶರ್ಮಾ ಕಾಂಪ್ಲೆಕ್ಸ್ ನಲ್ಲಿ ಶಾಖೆ ಆರಂಭವಾಗಲಿದ್ದು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಉದ್ಘಾಟಿಸಲಿದ್ದಾರೆ ಎಂದರು .
ನಮ್ಮ ಸಹಕಾರಿ ಕಳೆದ ವರ್ಷವಷ್ಟೇ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡಿರುವ ವಿಕಾಸ ಬ್ಯಾಂಕ್ ತನ್ನ 27 ವರ್ಷಗಳ ಸಹಕಾರಿ ಯಾತ್ರೆಯಲ್ಲಿ ಅನೇಕ ವಿನೂತನ ವಿಚಾರಗಳಿಗೆ ಚಿಂತನೆಗಳಿಗೆ ಮುನ್ನುಡಿ ಬರೆಯುತ್ತಿದೆ.
1979 ರಲ್ಲಿ ವಿಕಾಸ ಯುವಕ ಮಂಡಳ ಎಂಬ ಸಮಾಜಮುಖಿ ಸಂಘಟನೆಯ ಮೂಲಕ ಪ್ರಾರಂಭವಾದ ನಮ್ಮ ಸಾಮಾಜಿಕ ಕಾರ್ಯ ಚಟುವಟಿಕೆಗಳು ಮುಂದೆ 1997 ರಲ್ಲಿ ವಿಕಾಸ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು.
ಮೊದಲ ದಿನದಿಂದಲೇ ಸಂಪೂರ್ಣ ಗಣಕೀಕೃತ ಹಾಗೂ ಹವಾನಿಯಂತ್ರಿತ ಬ್ಯಾಂಕ್ ಆಗಿ ಕಾರ್ಯ ಪ್ರಾರಂಭಿಸಿದ ವಿಕಾಸ ಬ್ಯಾಂಕ್, ಮುಂದೆ ಅಂದಿನ ಮಾರುಕಟ್ಟೆಯ ಅವಶ್ಯಕತೆಯಂತೆ ವರ್ಷದ 365 ದಿನವೂ ರಜೆ ರಹಿತ ಹಾಗೂ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಗ್ರಾಹಕರಿಗೆ ನಿರಂತರ ಸೇವಾ ಸೌಲಭ್ಯ ನೀಡುತ್ತಾ ಬಂದಿದೆ.
ಬಹುಶಃ ವಿಕಾಸ ಬ್ಯಾಂಕ್ ವರ್ಷದ ಎಲ್ಲ ದಿನಗಳಲ್ಲೂ ರಜೆ ರಹಿತ ಬ್ಯಾಂಕಿಂಗ್ ಸೇವೆ ನೀಡುವ ದೇಶದ ಏಕೈಕ ಬ್ಯಾಂಕ್ ಎನ್ನಬಹುದಾಗಿದೆ. ರಜಾ ದಿನಗಳಲ್ಲೂ ಲಾಕರ್ ಸೌಲಭ್ಯ, ಸಾಲ ಸೌಲಭ್ಯ ಸೇರಿದಂತೆ ಎಲ್ಲ ಬ್ಯಾಂಕಿಂಗ್ ಸೇವೆಗಳು ಕೂಡ ಲಭ್ಯವಿರಲಿವೆ.
ನೂತನ ತಂತ್ರಜ್ಞಾನ ಅಳವಡಿಕೆ ; ತಂತ್ರಜ್ಞಾನದ ಬಳಕೆಯಲ್ಲಿ ಕೂಡ ಸದಾ ಮುಂಚೂಣಿಯಲ್ಲಿರುವ ವಿಕಾಸ ಬ್ಯಾಂಕ್ ಇತರೇ ಮುಖ್ಯ ವಾಹಿನಿ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ನವ ಪೀಳಿಗೆಯ ಬ್ಯಾಂಕಿಂಗ್ ಸೌಲಭ್ಯಗಳಾದ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಯು.ಪಿ.ಐ, (ಪೇಮೆಂಟ್ ಆ್ಯಪ್ಗಳು – ಗೂಗಲ್ ಪೇ, ಫೋನ್ಪೆ, ಪೇಟಿಎಮ್ ಇತ್ಯಾದಿ) ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಹಾಗೂ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ತಂತ್ರಜ್ಞಾನ ಸೇವೆಗಳನ್ನು ನೀಡುತ್ತ ಗ್ರಾಹಕ ಸೇವೆಗೆ ಆದ್ಯತೆ ನೀಡುತ್ತ ಬಂದಿದೆ.
ಕೊಡುಗೆ ; ಸಹಕಾರ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ 2008 ರಲ್ಲಿ ನಷ್ಟದಲ್ಲಿದ್ದ ಹುಬ್ಬಳ್ಳಿಯ ಅಭಿನಂದನ ಸಹಕಾರಿ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ಜನರ ವಿಶ್ವಾಸವನ್ನು ಗಟ್ಟಿಗೊಳಿಸಿತಲ್ಲದೇ ನಷ್ಟದಲ್ಲಿದ್ದ ಬ್ಯಾಂಕಿನ ಗ್ರಾಹಕರ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿದೆ. ಇದರ ಅನುಭವದ ಆಧಾರದಲ್ಲಿ ಮತ್ತೆ 2022 ರಲ್ಲಿ ಬೀದರ್ ಮಹಿಳಾ ಸಹಕಾರಿ ಬ್ಯಾಂಕನ್ನು ಕೂಡ ವಿಕಾಸ ಬ್ಯಾಂಕಿನಲ್ಲಿ ವಿಲೀನಗೊಳಿಸಿ ಗ್ರಾಹಕರ ಹಿತ ಕಾಯುವ ಕೆಲಸ ಮಾಡಿದ್ದೆವೆ ಎಂದರು.
ಭಾರತೀಯ ರಿಜರ್ವ ಬ್ಯಾಂಕಿನ ಹೊಸ ಮಾನದಂಡಗಳ ಪ್ರಕಾರ, ಆಡಳಿತ ಮಂಡಳಿ ಅಲ್ಲದೇ ವ್ಯವಸ್ಥಾಪನಾ ಮಂಡಳಿಯನ್ನು ರಚಿಸಿದ ರಾಜ್ಯದ ಮೊದಲ ಸಹಕಾರ ಬ್ಯಾಂಕ್ ನಮ್ಮದಾಗಿದೆ. ಆರ್.ಬಿ.ಐ. ನ ಇತರ ಎಲ್ಲ ಮಾನದಂಡಗಳನ್ನು ಪಾಲಿಸಿದ ಪರಿಣಾಮವಾಗಿ ವಿಕಾಸ ಬ್ಯಾಂಕಿಗೆ ಒಟ್ಟು 10 ನೂತನ ಶಾಖೆಗಳನ್ನು ತೆರೆಯಲು ಪರವಾನಿಗೆ ದೊರೆತಿದೆ.
ಬ್ಯಾಂಕಿನ ಆರ್ಥಿಕ ಅಂಕಿ ಅಂಶ ಃ ನಮ್ಮ ಸಹಕಾರಿಯಲ್ಲಿ 564 ಕೋಟಿ ರೂಪಾಯಿಗಳ ಸಾಲ ನೀಡಲಾಗಿದ್ದು,755 ಕೋಟಿ ಠೇವಣಿ ಹೊಂದಿದೆ, ಒಟ್ಟು ವ್ಯವಹಾರ 1319 ಕೋಟಿ ವ್ಯವಹಾರ ವಿದೆ ಕೊಪ್ಪಳ ಶಾಖೆಯಲ್ಲಿ ಗ್ರಹಕರು ನಮ್ಮ ಸಹಕಾರದ ಸೇವೆ ಪಡೆದುಕೊಳ್ಳಲು ಮನವಿ ಮಾಡಿದರು
ವಿಕಾಸ ಮನೆ ಭೇಟಿ ಅಭಿಯಾನ :ಹೊಸ ಶಾಖೆ ಹೇಗೆ ಕಾರ್ಯನಿರ್ವಹಿಸಬೇಕು, ಗ್ರಾಹಕರ ಆಪೇಕ್ಷೆಗಳೇನು? ನಗರದ ಆರ್ಥಿಕ ಅಗತ್ಯಗಳನ್ನು ಅರಿಯುವ ದೃಷ್ಟಿಯಿಂದ ವಿಕಾಸ ಬ್ಯಾಂಕ್ ಕೊಪ್ಪಳದಲ್ಲಿ ಮನೆ ಮನೆ ಭೇಟಿ ಅಭಿಯಾನವನ್ನು ಮಾರ್ಚ್ 12 ರಿಂದ ಆರಂಭಿಸಿದ್ದು, ನಮ್ಮ ಬ್ಯಾಂಕ್ನ 22 ಸಿಬ್ಬಂದಿಗಳು ಕಳೆದ ಐದು ದಿನಗಳಿಂದ ನಗರದ ಬಹುತೇಕ ಪ್ರದೇಶಗಳಲ್ಲಿಯೂ ಮನೆ ಮನೆ ಸಂಪರ್ಕ ಮಾಡಿ ಸರಿಸುಮಾರು 6,000 ಮನೆಗಳಿಗೆ ಬ್ಯಾಂಕು ನೀಡುತ್ತಿರುವ ವಿವಿಧ ಸೇವೆಯ ಪ್ರಯೋಜನ ಪಡೆಯುವಂತೆ ಮಾಹಿತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕ ಅನಂತ ಜೋಶಿ, ವಿಕಾಸ ಬ್ಯಾಂಕ್ ಸಿಇಓ ಪ್ರಸನ್ನ ಹಿರೇಮಠ, ಕೊಪ್ಪಳ ಶಾಖೆಯ ವ್ಯವಸ್ಥಾಪಕ ಉದಯ ಕುಮಾರ ಹಾಗೂ ಹನುಮೇಶ ಇತರರು ಇದ್ದರು.
