
ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿಗೆ ಚಿದಾನಂದಪ್ಪ ಯಾದವ್ ಅಧ್ಯಕ್ಷ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,18- ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಕೆ.ಇ.ಚಿದಾನಂದಪ್ಪ ಯಾದವ್ ಅವರನ್ನು ನೇಮಕ ಮಾಡಿ ಸರ್ಕಾರ ಶನಿವಾರ ಸಂಜೆ ಆದೇಶ ಹೊರಡಿಸಿದೆ.
ಉಪಾಧ್ಯಕ್ಷರಾಗಿ ಎನ್.ಕರಿಬಸಪ್ಪ, ಎ.ಮಾನಯ್ಯ, ಆಶಾಲತಾ ಸೋಮಪ್ಪ, ಚಾಂದಬಾಷ, ಸಂಗನಕಲ್ಲು ವಿಜಯಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಸಮಿತಿಯ ಸದಸ್ಯರನ್ನಾಗಿ ಗೋನಾಳ ನಾಗಭೂಷಣಗೌಡ (ಬಳ್ಳಾರಿ ತಾಲ್ಲೂಕು ಅಧ್ಯಕ್ಷ)ಸಿ.ಸತೀಶಕುಮಾರ್(ಸಂಡೂರು ತಾಲೂಕು ಅಧ್ಯಕ್ಷ)ಶ್ರೀನಿವಾಸರಾವ್ (ಕಂಪ್ಲಿ ತಾಲೂಕು ಅಧ್ಯಕ್ಷ)ಮಾರುತಿ ವರಪ್ರಸಾದ ರೆಡ್ಡಿ, (ಸಿರುಗುಪ್ಪ ತಾಲ್ಲೂಕು ಅಧ್ಯಕ್ಷ)
ಯಾಳ್ಪಿ ದಿವಾಕರಗೌಡ, ಯತೀಂದ್ರಗೌಡ, ಎಂ.ಎಸ್.ಮಂಜುಳ, ಶಿವರಾಜ್, ಹುಮಾಯೂನ್ ಖಾನ್, ಆನಂದ್ ಬಿ.ಎಂ, ರವಿಕುಮಾರ್ ರೆಡ್ಡಿ, ಅಫಾಕ್, ಸುರೇಶ್ ಅಲಿವೇಲು, ನಾಗೇನಹಳ್ಳಿ ಮಲ್ಲಿಕಾರ್ಜುನ, ಪದ್ಮ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೃತಜ್ಞತೆ ಸಲ್ಲಿಸಿದ ಚಿದಾನಂದಪ್ಪ ಯಾದವ್: ಕಳೆದ ಹಲವು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ ಕೊಂಡು ಕೆಲಸ ಮಾಡಿರುವ ಹಾಗೂ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಸಮುದಾಯಗಳ ಸಂಘಟನೆಯಲ್ಲಿ ತೊಡಗಿಕೊಂಡಿರುವ ನನ್ನನ್ನು ಗುರುತಿಸಿದ ಕಾಂಗ್ರೆಸ್ ಪಕ್ಷದ ನಾಯಕರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್,ನಾರಾ ಭರತ್ ರೆಡ್ಡಿ, ಬಿ.ಎಂ.ನಾಗರಾಜ್, ಡಿಸಿಸಿ ಜಿಲ್ಲಾಧ್ಯಕ್ಷ ಜಿ.ಎಸ್.ಮೊಹಮ್ಮದ್ ರಫೀಕ್ ಹಾಗೂ ಜಿಲ್ಲೆಯ ಎಲ್ಲಾ ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ, ಪಕ್ಷದ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಮತ್ತು ನನ್ನ ಕರ್ತವ್ಯ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ.