IMG-20240320-WA0011

ಒಂದೇ ದಿನ ಮೂರು ಕಡೆ ಮನೆಗಳ್ಳತನ
ಬೆಚ್ಚಿ ಬಿದ್ದ ನಾಗರಿಕರು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 20- ನಗರದಲ್ಲಿ ಸರಣಿ ಕಳ್ಳತನ- ರೋಡ್ ಗೋಲ್ಡ್ ಬಂಗಾರದ ಆಭರಣ ಬಿಟ್ಟು, ಅಸಲಿ ಚಿನ್ನಾಭರಣ ಮಾತ್ರ ಕದ್ದ ಕಳ್ಳರು, ಮಕ್ಕಳ ಶಾಲೆ ಪೀಸ್ ಗೆ ಇಟ್ಟಿದ್ದ ಹಣ, ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಇಟ್ಟಿದ್ದ ಹಣ ಕೂಡಾ ಕಳ್ಳರು ಕಳ್ಳತನ ಮಾಡಿರುವ ಘಟನೆ ಜರುಗಿದೆ.
ಕೊಪ್ಪಳ ನಗರದ ಭಾಗ್ಯ ನಗರದ ವ್ಯಾಪ್ತಿಯಲ್ಲಿರುವ ಕೀರ್ತಿ ನಗರ, ಧ್ವನ್ವಂತರಿ ಕಾಲೋನಿಯಲ್ಲಿ ಕಳ್ಳತನ ನಡೆದಿದೆ. ಒಂದೇ ರಾತ್ರಿ ಮೂರು ಕಡೆ ಮನೆಗಳ್ಳತನ ವಾಗಿದ್ದು‌ ನಾಗರಿಕರು ಬೆಚ್ಚಿಬಿದ್ದಿದ್ದಾರೆ.

ಕೀರ್ತಿ ನಗರದಲ್ಲಿರುವ ಆಧಿರಾಜ್ ಬಾವಿಕಟ್ಟಿ ಮನೆಯಲ್ಲಿ ನೂರು ಗ್ರಾಂ ಚಿನ್ನಾಭರಣ, ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ನಗದು, ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದೋಯ್ದಿದ್ದಾರೆ. ಹೌದು ಬಾವಿಕಟ್ಟಿ ದಂಪತಿ ಮನೆಯಲ್ಲಿ ರಾತ್ರಿ ಕೂಲರ್ ಹಾಕಿಕೊಂಡು ಮಲಗಿದೆ. ಆದ್ರೆ ಹಿಂಬಾಗಿಲ ಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು, ಅಲಮಾರಿಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದೋಯ್ದಿದ್ದಾರೆ.
ಬಾವಿಕಟ್ಟಿ ದಂಪತಿಗೆ ಮೂರು ಮಕ್ಕಳಿದ್ದು, ಅವರ ಶಿಕ್ಷಣಕ್ಕೆ ಕಳೆದ ಕೆಲ ವರ್ಷಗಳಿಂದ ಪಿಗ್ಗಿ ಬಾಕ್ಸ್ ನಲ್ಲಿ ಪ್ರತಿನಿತ್ಯ ಹಣ ಹಾಕುತ್ತಿದ್ದರಂತೆ. ಜೊತೆಗೆ ಸಂಬಂಧಿಯ ಮದುವೆಗಾಗಿ ಪರಿಚಿತರಿಂದ ಆರವತ್ತು ಸಾವಿರ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರಂತೆ. ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಕೂಡಾ ಒಂದು ಬಾಕ್ಸ್ ನಲ್ಲಿ ಹಣ ಸಂಗ್ರಹಿಸಿದ್ದರಂತೆ. ಮನೆಯ ಹಾಲ್ ನಲ್ಲಿ ದಂಪತಿ ಮಲಗಿದ್ರು ಕೂಡಾ,ಅವರಿಗೆ ಗೊತ್ತಾಗದಂತೆ, ಕಳ್ಳರು, ಇಡೀ ಮನೆಯನ್ನು ಗುಡಿಸಿಕೊಂಡು ಹೋಗಿದ್ದಾರೆ. ಅಚ್ಚರಿಯಂದ್ರೆ, ಮನೆಯಲ್ಲಿರುವ ಹಣ ಮತ್ತು ಅಸಲಿ ಚಿನ್ನಾಭರಣಗಳನ್ನು ಕದ್ದೋಯ್ದಿರುವ ಕಳ್ಳರು, ಅಲ್ಲಿಯೇ ರೋಡ್ ಗೋಲ್ಡ್ ಆಭರಣಗಳು ಕಂಡರು ಕೂಡಾ, ಅವುಗಳಲ್ಲಿ ಒಂದನ್ನು ಮುಟ್ಟದೇ, ಅಸಲಿ ಚಿನ್ನಾಭರಣಗಳನ್ನು ಮಾತ್ರ ಕದ್ದೋಯ್ದಿರುವದು ಅಚ್ಚರಿ ಜೊತೆಗೆ ಶಾಕ್ ತರಿಸಿದೆ.

ಧ್ವನಂತರಿ ಕಾಲೋನಿಯಲ್ಲಿ ಜಯಮ್ಮ ಅನ್ನೋರ ಮನೆಯಲ್ಲಿ ಕೂಡಾ ಕಳ್ಳತನವಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕುಟುಂಬದವರು ಮನೆಯ ಮೇಲೆ ಮಲಗಿದ್ದರಂತೆ. ಹೀಗಾಗಿ ಸುಲಭವಾಗಿ ಮನೆಯ ಬಾಗಿಲು ಮುರಿದ ಒಳ ನುಗ್ಗಿರೋ ಕಳ್ಳರು, ಮನೆಯಲ್ಲಿದ್ದ ಹತ್ತು ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣಳನ್ನು ಕದ್ದೋಯ್ದಿದ್ದಾರೆ. ಇನ್ನು ಪಾಂಡುರಂಗ ಹೊಸಮನಿ ಅನ್ನೋರ ಮನೆಯಲ್ಲಿ ಕೂಡಾ ಕಳ್ಳರು ಮನೆಯೊಳಗೆ ನುಗ್ಗಿ, ಮನೆಯಲ್ಲಿದ್ದ ಮೂವತ್ತು ಗ್ರಾಂ ಚಿನ್ನಾಭರಣ ಮತ್ತು ಹತ್ತು ಸಾವಿರ ನಗದು ಕದ್ದೋಯ್ದಿದ್ದಾರೆ. ಮನೆಯಲ್ಲಿ ಆರಾಮಾಗಿ ಕೂತು, ಮನೆಯನ್ನಲ್ಲಾ ಹುಡುಕಿ, ಚಿನ್ನಾಭರಣ, ಹಣವನ್ನು ಕದ್ದೋಯ್ದಿರುವ ಕಳ್ಳರು, ಮನೆಯಲ್ಲಿಯೇ ನೀರು ಕುಡಿದು ಹೋಗಿದ್ದಾರೆ.
ಇನ್ನು ಮೂರು ಕುಟುಂಬಗಳು ಕೂಡಾ ಸಣ್ಣಪುಟ್ಟ ಕೆಲಸವನ್ನು ಮಾಡಿ ಜೀವನ ಕಟ್ಟಿಕೊಂಡಿದ್ದವು. ಮನೆಯಲ್ಲಿಯೇ ಇದ್ದರು ಕೂಡಾ ಕಳ್ಳರು ನುಗ್ಗಿ ಮನೆಗಳ್ಳತನ ಮಾಡಿಕೊಂಡು ಹೋಗಿದ್ದಾರೆ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ, ತಮ್ಮ ಚಿನ್ನಾಭರಣ ಮತ್ತು ಹಣವನ್ನು ಮರಳಿ ಕೊಡಿಸುವ ಕೆಲಸ ಮಾಡಬೇಕು ಅಂತ ಮೂರು ಕುಟುಂಬದವರು ಆಗ್ರಹಿಸಿದ್ದಾರೆ.

ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮೂರು ಕಡೆ ಮನೆಗಳ್ಳತನ ಪ್ರಕರಣದ ಬಗ್ಗೆ ದೂರು ದಾಖಲಾಗಿವೆ. ಆದ್ರೆ ಕಳೆದ ಕೆಲ ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದ್ರೆ ಕಳ್ಳರು ಪತ್ತೆಯಾಗದೇ ಇರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

Leave a Reply

Your email address will not be published. Required fields are marked *

error: Content is protected !!