IMG-20240324-WA0036

ಬಿಜೆಪಿ ಎಸ್ಸಿ ಘಟಕ ನೂತನ ತಾಲೂಕ ಅಧ್ಯಕ್ಷರಾಗಿ ಸಿದ್ದು ಮಣ್ಣಿನವರ ನೇಮಕ 

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,24-  ಬಿಜೆಪಿ ಪಕ್ಷದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡಿ ಇಡೀ ಪ್ರಪಂಚವೇ ನಮ್ಮ ದೇಶದ ಕಡೇ ತಿರುಗಿ ನೋಡುವಂತೆ ಮಾಡಿದ ಜನಮೆಚ್ಚಿದ ನಾಯಕ ಎಂದು ಮಾಜಿ ಸಚಿವ ಹಾಲಪ್ಪಆಚಾರ ಹೇಳಿದರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಸದೃಢವಾಗಿ ಸಂಘಟನೆಮಾಡುವದ ಜೊತೆಗೆ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷಗೋಸ್ಕರ ಶ್ರಮಿಸಬೇಕು ಮಾಜಿ ಸಚಿವ ಹಾಲಪ್ಪ ಆಚಾರ ರವರ ಆದೇಶದ ಮೇರೆಗೆ ತಾಲೂಕ ಎಸ್ಸಿ ಮೋರ್ಚಾ ನೂತನ ತಾಲೂಕ ಅಧ್ಯಕ್ಷರನ್ನಾಗಿ ಬೇವೂರು ಗ್ರಾಮದ ಸಿದ್ದು ಮಣ್ಣಿನವರವರನ್ನು ಆಯ್ಕೆ ಮಾಡಿಲಾಯಿತ್ತು ಇವರಿಗೆ

ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ ಅವರು ಆದೇಶ ಹೊರಡಿಸಿದ್ದಾರೆ, ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಸಬ ಹಂಚಿನಾಳ ಹೊರ ವಲಯದ ಪಕ್ಷದ ಕಛೇರಿಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ನೂತನ ಅಧ್ಯಕ್ಷರಿಗೆ ಶುಭಕೋರಿ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ನಿಮ್ಮ ಶಕ್ತಿ ಮಿರಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ನೂತನ ಅಧ್ಯಕ್ಷ ಸಿದ್ದು ಮಣ್ಣಿನವರ ಮಾತನಾಡಿ,

ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ಗುರುತಿಸಿ ನಮಗೆ ನೀಡಿರುವ ಜವಾಬ್ದಾರಿಯನ್ನು ನಾವು ಹಗಲು ಇರುಳು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತೇನೆ ಮತ್ತು ಅಚ್ಚುಕಟ್ಟಾಗಿ ನಿಭಾಯಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಸಂಘಟಿಸಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಯಲಬುಗಾ೯ ಮಂಡಲದ ತಾಲೂಕ ಅಧ್ಯಕ್ಷ ಮಾರುತಿ ಗಾವರಾಳ, ತಾಲೂಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಕೆಂಚಮ್ಮನವರ, ನಗರ ಘಟಕಗಳ ತಾಲೂಕ ಪ್ರಧಾನ ಕಾರ್ಯದರ್ಶಿ ಅಮರೇಶ ಹುಬ್ಬಳ್ಳಿ,  ಪಕ್ಷದ ಮುಖಂಡರಾದ ಶಿವಕುಮಾರ ನಾಗಲಾಪುರಮಠ, ಶಿವಣ್ಣವಾದಿ ಹಾಗೂ ಪಕ್ಷದ ಅಭಿಮಾನಿಗಳು ಮುಖಂಡರು ಕಾರ್ಯಕರ್ತರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!