
ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ರೈತರಿಗೆ ಬಡ್ಡಿ ಕಟ್ಟಲು ಒತ್ತಡ ಸಲ್ಲದು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ- ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕ್ ತಾಲೂಕಿನ ರೈತರು ಬಡ್ಡಿ ಚಕ್ರಬಡ್ಡಿ ಸುಸ್ತಿ ಬಡ್ಡಿ ಕಟ್ಟುವಂತೆ ಒತ್ತಾಯಿಸುತ್ತಿರುವ ಕ್ರಮ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಅಧ್ಯಕ್ಷ ಆರ್ ಮಾಧವ ರೆಡ್ಡಿ ಒತ್ತಾಯಿಸಿದರು.
ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಕರ್ನಾಟಕ ಗ್ರಾಮೀಣ ಪ್ರಗತಿ ಬ್ಯಾಂಕ್ ಮುಂಭಾಗದಲ್ಲಿ ರೈತರು ಬ್ಯಾಂಕ್ ವ್ಯವಸ್ಥಾಪಕ ಮಾರೆಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯ ಸಂಘ ಹಾಗೂ ಹಸಿರು ಸೇನೆಯ ರೈತರು ಚೈತನ್ಯ ಸಂಕಲ್ಪ ಯಾತ್ರೆ ಜಾಥಾ ಅವೈಜ್ಞಾನಿಕ ಸಾಲ ವಸೂಲಾತಿ ವಿರೋಧಿಸಿ 23 ದಿನಗಳಿಂದ ಆಯಾ ಜಿಲ್ಲೆಗಳ ಹೋಬಳಿ ತಾಲೂಕಿನಲ್ಲಿ ನಡೆದಿದ್ದು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿಯ ಎದುರು ಸಮಾರೋಪ ಜರುಗಿಸಿದರು.
ಕುರುಗೋಡು ತಾಲೂಕು ಅಧ್ಯಕ್ಷ ಕಲ್ಲು ಕಂಬ ಪಂಪಾಪತಿ ಸಿರುಗುಪ್ಪ ತಾಲೂಕು ಅಧ್ಯಕ್ಷ ಪಂಪನಗೌಡ ಕೆ ಬಸವ ರೆಡ್ಡಿ ಓಂಕಾರ ಗೌಡ ಸುರೇಶ್ ತಿಮ್ಮರೆಡ್ಡಿ ಈರಣ್ಣ ಉಮೇಶ್ ದ್ಯಾವಪ್ಪ ಭೀಮ ಕರೂರು ಕೊಂಚಿಗೇರಿ ಮುದ್ದಟನೂರು ರೈತರು ಅಸಿಸ್ಟೆಂಟ್ ಮ್ಯಾನೇಜರ್ ಯಶವಂತ್ ಸುರೇಶ್ ಇತರರು ಇದ್ದರು.