
ಚುನಾವಣೆ ಆಯೋಗ ನ್ಯಾಯಯುತವಾಗಿ ಕೆಲಸ ಮಾಡುವ ಭರವಸೆ : ಜ್ಯೋತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ನೀತಿ ಸಂಹಿತೆ ಜಾರಿಯಲ್ಲಿದೆ, ಕೇಂದ್ರ ಚುನಾವಣೆ ಆಯೋಗ ಲೋಕಸಭೆ ಚುನಾವಣೆಗಳನ್ನು ನ್ಯಾಯಸಮ್ಮತವಾಗಿ, ಯಾರ ಹಂಗೂ ಎಲ್ಲದಂತೆ ಚುನಾವಣೆ ನಡೆಸುವ ಭರವಸೆ ಇದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರು ನಿನ್ನೆ ಸಚಿವ ಶಿವರಾಜ ತಂಗಡಗಿ ಇಂದು ಡಿ.ಕೆ. ಶಿವಕುಮಾರ ಮತ್ತು ಐಎಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಬಿಜೆಪಿಯವರ ಈ ಆಟ ನೋಡಿದರೆ ಅನುಮಾನ ಮೂಡುತ್ತಿದೆ, ಆಯೋಗ ಮುಖ್ಯ ಆಯುಕ್ತರು ಚುನಾವಣೆ ಹೊಸ್ತಿಲಲ್ಲಿ ರಾಜೀನಾಮೆ ನೀಡಿದ್ದು, ಕೊನೆಘಳಿಗೆಯಲ್ಲಿ ಹೊಸಬರು ಬಂದಿದ್ದಾರೆ, ಮೊದಲೇ ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಈಗ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಅಧಿಕಾರ ಎಲ್ಲರಿಗೂ ಇದೆ, ತಂಗಡಗಿಯವರು ಹೇಳಿದ ಮಾತಲ್ಲಿ ತಪ್ಪೇ ಇಲ್ಲ, ಮೋದಿ ಕುರಿತು ಅವರು ಮಾತನಾಡಿದ್ದಲ್ಲ ಹೊರತು ಉದ್ಯೋಗ ಕೊಡದ ಕೇಂದ್ರ ಸರಕಾರದ ಬಗ್ಗೆ ಮಾತನಾಡಿದ್ದಾರೆ, ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಬಂದು ಮೋದಿ ಮೋದಿ ಎನ್ನುವ ಪ್ರಾಯೋಜಿತ ಯುವಜನರಿಗೆ ಕಪಾಳಕ್ಕೆ ಭಾರಿಸಿ ಅಂದಿರುವದು ನಮ್ಮಲ್ಲಿ ವಾಡಿಕೆಯ ಭಾಷೆಯಾಗಿದೆ, ನಾವು ಉತ್ತರ ಕರ್ನಾಟಕದಲ್ಲಿ ಮಾತನಾಡಿದರೆ ನಮ್ಮನ್ನೇ ನಾವು ಬೈದುಕೊಳ್ಳುವ ಶಬ್ದಗಳು ಇರುತ್ತವೆ ಅವುಗಳನ್ನೇ ಮುಂದು ಮಾಡಿ ಕಾಂಗ್ರೆಸ್ ಅಗ್ರೆಸ್ಸಿವ್ ಹೋರಾಟ ಮಾಡುವದನ್ನು ತಡೆಯಲು ಸಂಚು ರೂಪಿಸಿದಂತೆ ಕಾಣುತ್ತದೆ.
ಇನ್ನು ಸಿ.ಟಿ. ರವಿ ಸಂಸ್ಕೃತಿಯ ಎಲ್ಲೆ ಮೀರಿ ತಂಗಡಗಿ ಅವರ ತಾಯಿಯನ್ನು ನಿಂದಿಸಿದ್ದು ಎಷ್ಟು ಸರಿ, ರಾಜಕೀಯದಲ್ಲಿ ಟೀಕೆ ಮಾಡುವುದು ಸಾಮಾನ್ಯ, ಟೀಕೆ ಜೊತೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ನಡೆಯುತ್ತಿರುತ್ತದೆ, ಆದರೆ ಹೆಣ್ಣು ಕುಲವನ್ನು ಕೀಳಾಗಿ ಕಂಡು ಅವಮಾನಿಸಿ ಮಾತನಾಡಿರುವುದು ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ, ಆದ್ದರಿಂದ ಅವರು ಕ್ಷಮೆ ಕೋರಬೇಕು ಎಂದರು.
ಹೇಮಂತ್ ನಿಂಬಾಳ್ಕರ್ ಕಛೇರಿಯಿಂದ ಮತ ಕೇಳುತ್ತಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಅವರು ಕ್ಷೇತ್ರಕ್ಕೆ ಹೋಗಿ ಮತ ಕೇಳಿದರೆ ದಾಖಲೆ ಕೊಟ್ಟು ವರ್ಗಾವಣೆ ಮಾಡಿಸಲು ಪ್ರಯತ್ನಿಸಲಿ ಅದು ಬಿಟ್ಟು ತಮ್ಮ ಅಧಿಕಾರಿ ವರ್ಗ ಹಿಡಿದು ಕಾಂಗ್ರೆಸ್ ಹಣಿಯಲು ಬಂದರೆ ಈ ಬಾರಿ ಜನ ಬಿಜೆಪಿಯ ಯಾವ ಮುಖಂಡರನ್ನೂ ಜನ ಸುಮ್ಮನೇ ಬಿಡಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಮುಂದುವರಿಯಲಿ, ಚುನಾವಣೆ ನ್ಯಾಯಯುತವಾಗಿದ್ದಾಗ ಯಾರೇ ಗೆದ್ದರು ಅದು ಪ್ರಜಾಪ್ರಭುತ್ವಕ್ಕೆ ಶಕ್ತಿ ಆದರೆ ಬಿಜೆಪಿ ಅಡ್ಡ ದಾರಿ ಹಿಡಿದಿರುವದನ್ನು ನೋಡಿದರೆ ಅದಕ್ಕೆ ಹಿಟ್ಲರ್ ಆಡಳಿತ ಇಷ್ಟವಿದ್ದಂತೆ ಕಾಣುತ್ತದೆ ಎಂದು ಜ್ಯೋತಿ ಹೇಳಿದ್ದಾರೆ.