
ಜೆಸ್ಕಾಂ ಮುನಿರಾಬಾದ್ : 31 ರಂದು ವಿದ್ಯುತ್ ವ್ಯತ್ಯಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,27- ಜೆಸ್ಕಾಂ ಮುನಿರಾಬಾದ್ ಉಪ ವಿಭಾಗದ ಶಾಖೆ-1ರ (ಮುನಿರಾಬಾದ್ ಶಾಖೆ) ವ್ಯಾಪ್ತಿಯಲ್ಲಿ ಫೀಡರ್ಗಳ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ ಫೀಡರ್ಗಳಿಗೆ ಸಂಬAಧಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ 31 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್1 ಫ್ಯಾಕ್ಟರಿ ಫೀಡರ್ಗೆ ಒಳಪಡುವ ಲಿಂಗಾಪುರ, ಹೊಸಳ್ಳಿ, ಬೇವಿನಹಳ್ಳಿ, ಟಾಟಾ ಶೋ ರೂಮ್ ಪ್ರದೇಶ, ಹುಲಿಗಿ, ಕಿರ್ಲೋಸ್ಕರ್ ಕಾರ್ಖಾನೆ ಪ್ರದೇಶ (ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಲಿಮಿಟೆಡ್ ಪ್ರದೇಶ), ಎಫ್2 ಕಾಲೋನಿ ಫೀಡರ್ಗೆ ಒಳಪಡುವ ಮುನಿರಾಬಾದ್ ಮತ್ತು ಎಸ್.ಆರ್.ಎಸ್ ಲಿಂಗಾಪುರ, ಹಾರ್ಟಿಕಲ್ಚರ್ ಕಾಲೇಜ್ ಪ್ರದೇಶ, ಚಿಕ್ಕ ಕಾಸನಕಂಡಿ ಪ್ರದೇಶ, ಎಫ್4 ಮುನಿರಾಬಾದ್ ಐ.ಪಿ ಫೀಡರ್ಗೆ ಒಳಪಡುವ ಲಿಂಗಾಪುರ, ಹೊಸಳ್ಳಿ ಮತ್ತು ಕಾಸನಕಂಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ನಿಗದಿತ ಅವಧಿಗೆ ಮುಂಚಿತವಾಗಿ ನಿರ್ವಹಣಾ ಕೆಲಸ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು / ಗ್ರಾಹಕರು ಯಾವುದೇ ಕಾರಣಕ್ಕೂ ಮಾರ್ಗಮುಕ್ತತೆ ತೆಗೆದುಕೊಂಡ ಅವಧಿಯಲ್ಲಿ ವಿದ್ಯುತ್ಗೆ ಸಂಬಂಧಿಸಿದ ಯಾವುದೇ ಕಾಮಗಾರಿಯನ್ನು ನಡೆಸಬಾರದು.
ಒಂದು ವೇಳೆ ಯಾವುದೇ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಗ್ರಾಹಕರೇ ನೇರ ಹೊಣೆಗಾರರಾಗುತ್ತಾರೆ. ಇಂತಹ ವಿದ್ಯುತ್ ಅವಘಡಕ್ಕೆ ಜೆಸ್ಕಾಂ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲ ಎಂದು ಜೆಸ್ಕಾಂ ಮುನಿರಾಬಾದ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.