IMG-20240327-WA0063

ಜೆಡಿಎಸ್ – ಬಿಜೆಪಿ ಒಂದೇ ತಾಯಿ ಮಕ್ಕಳಂತೆ ಕೆಲಸ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮ ಗುರಿ

ಕರುನಾಡ ಬೆಳಗು ಸುದ್ದಿ 

ಕೊಪ್ಪಳ, 27- ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಪಕ್ಷದ ಪ್ರಮುಖರು, ನಗರ ವಾರ್ಡ ಮತ್ತು ಭೂತ ಮಟದಲ್ಲಿ ಸಮನ್ವಯ ಸಾದಿಸುತ್ತೆವೆ, ಒಂದು ತಾಯಿ ಮಕ್ಕಳಂತೆ ಚುನಾವಣೆ ಕೆಲಸಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೆವೆ ಎಂದು ಬಿಜೆಪಿ ಮುಖಂಡ ರಘನಾಥ ಮಲ್ಕಾಪೂರೆ ಹೇಳಿದರು.

ಅವರು ಕೊಪ್ಪಳದ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಬಿಜೆಪಿ – ಜೆಡಿಎಸ್ ಸಮನ್ವಯತೆ ಸಭೆಯಲ್ಲಿ ನಂತರ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ವಿಶೇಷವಾಗಿ ಹೈಕ ಭಾಗದಲ್ಲಿ ನಮ್ಮ ಮೈತ್ರಿ ಹೆಚ್ಚು ಸಹಕಾರಿಯಾಗಲಿದ್ದು ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ನಮ್ಮ ಅಭ್ಯರ್ಥಿಗಳು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲವು ಸಾದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸಂಸದ ಸಂಗಣ್ಣ ಕರಡಿ ಅವರು ಈಭಾಗದ ದೊಡ್ಡ ಶಕ್ತಯಾಗಿದ್ದು ಅವರನ್ನು ಹೈಕಮಾಂಡ ಮನವಲಿಸಿದ್ದು ಬರುವದಿಗಳಲ್ಲಿ ನಮ್ಮ ಜೋತೆ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ನಾಡಗೌಡ್ರ ರಾಜ್ಯದಲ್ಲಿ ಒಪ್ಪಂದದಂತೆ ಕೋರ್ ಕಮಿಟಿ ಸಭೆ ಮತ್ತು ಎಂಟು ವಿಧಾನ ಸಭಾ ಕ್ಷೇತ್ರದ ಎಲ್ಲಾ ಕಡೆ ಎರಡು ಪಕ್ಷದ ಕಾರ್ಯಕರ್ತರ ಸಮಾವೇಶ ಮಾಡು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಮನ್ವಯತೆಯಿಂದ ಪ್ರಾಮಾಣಿಕವಾಗಿ ಅಭ್ಯರ್ಥಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತೆವೆ ದೇಶದ ಪ್ರಧಾನಿ ಮತ್ತೆ ಮೋದಿ ಆಗಬೇಕು ಎನ್ನುವ ಕನಸಿನಿಂದ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರಸ್ ನಾಯಕರು ಹತಾಶರಾಗಿ ಬಾಲಿಶತನದ ಹೇಳಿಕೆ ನೀಡುತ್ತಿದ್ದು ಸಚಿವ ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ ಮುಖಂಡರು ನಾಲಿಗೆ ಹಿಡಿತ ತಪ್ಪುತ್ತಿದೆ ಎಂದರು.

ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ ನನಗೆ ರಾಜಕಾರಣ ಹೊಸದಲ್ಲ ನಮ್ಮ ತಂದೆ, ಅಣ್ಣ ನಾನು ಸತತವಾಗಿ 35 ವರ್ಷದಿಂದ ರಾಜಕಾರಣ ಮಾಡುತ್ತಿದ್ದೆವೇ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಗುರಿ ನಮ್ಮದು ಎಂದರು.

ಈ ಸಂದರ್ಭದಲ್ಲಿ ಮಾಜಿ ಅಚಿವ ಹಾಲಪ್ಪ ಆಚಾರ, ನಾಗಪ್ಪ ಸಾಲೋಣಿ, ಜೆಡಿಎಸ್ ಮುಖಂಡ ಸಿ.ವಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಸಾಲೋಣಿ ನಾಗಪ್ಪ ,ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಡೆಸಗೂರ, ನೇಮಿರಾಜ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!