
ಮಾನವ ಧರ್ಮದ ಉದ್ದಾರಕ್ಕೆ ರೇಣುಕರ ಕೊಡುಗೆ ಅಪಾರ : ಕೆ.ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಗಂಗಾವತಿ,28- ಮಾನವ ಧರ್ಮಕ್ಕೆ ರೇಣುಕಾಚಾರ್ಯರ ಕೊಡುಗೆ ಅಮೋಘವಾದದ್ದು ಮಾನವ ಧರ್ಮದ ಉದ್ಧಾರಕ್ಕಾಗಿ ರೇಣುಕರು ಜನ್ಮ ತಾಳಿದ್ದರು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ ಹಿಟ್ನಾಳ್ ಹೇಳಿದರು.
ಅವರು ನಗರದ ಎಂ ಜಿ ರಸ್ತೆಯಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ನಿಮಿತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಂಗಮ ಸಮಾಜ ಅತ್ಯಂತ ಕಷ್ಟಕರ ಸಮಾಜವಾಗಿದೆ. ಸಮಾಜದ ಉದ್ದಾರಕ್ಕಾಗಿ ಆಧ್ಯಾತ್ಮದ ಧಾರ್ಮಿಕ ಸೇವೆಗಳನ್ನು ಜಂಗಮ ಸಮಾಜದವರು ಮಾಡುತ್ತಾರೆ .ಜಂಗಮ ಸಮಾಜದ ಉದ್ದಾರಕ್ಕೆ ಸರ್ವರಿಗೂ ಕೈಜೋಡಿಸಬೇಕಾಗಿದೆ. ಶೈಕ್ಷಣಿಕ,ರಾಜಕೀಯ ಮತ್ತು ಆರ್ಥಿಕವಾಗಿ ಜಂಗಮ ಸಮಾಜದ ಅಭಿವೃದ್ಧಿಗೆ ಸರಕಾರಗಳು ಯೋಜನೆಗಳನ್ನ ರೂಪಿಸಬೇಕಾಗಿದೆ ಎಂದರು.
ಜಂಗಮ ಸಮಾಜದ ಮುಖಂಡರಾದ ಎಚ್. ಎಮ್.ಸಿದ್ದರಾಮಯ್ಯ ಸ್ವಾಮಿ, ತಿಪ್ಪೇರುದ್ರಸ್ವಾಮಿ, ಬಸವರಾಜ್ ಮಳೆಮಠ, ಶರಣಯ್ಯ ಸ್ವಾಮಿ, ಶರಬಯ್ಯ ಸ್ವಾಮಿ, ಎಸ್.ಬಿ.ಹಿರೇಮಠ ,ಹುಚ್ಚಯ್ಯಸ್ವಾಮಿ, ವೀರಯ್ಯಸ್ವಾಮಿ, ಉಮೇಶ, ಕೆ.ಎಂ.ಶರಣಯ್ಯ ಸ್ವಾಮಿ ಸೇರಿ ಜಂಗಮ ಸಮಾಜದವರಿದ್ದರು.