
ರಾಜಶೇಖರ ಅಂಗಡಿ ಕನ್ನಡದ ಕಟ್ಟಾಳು : ಮಹಾಂತೇಶ ಮಲ್ಲನಗೌಡರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,28- ರಾಜಶೇಖರ ಅಂಗಡಿಯವರು ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ರೂವಾರಿಯಾಗಿದ್ದು. ಈಗ ನಿಧನರಾಗಿದ್ದಾರೆ. ಅವರ ಹೆಸರು ನೆನಪು ಉಳಿಯಲು ಅವರ ಹೆಸರಿನಲ್ಲಿ ಕೊಪ್ಪಳದಲ್ಲಿ ರಸ್ತೆ, ವೃತ್ತ ಅಥವಾ ಭವನಕ್ಕೆ ಹೆಸರಿಡುವಂತ ಕೆಲಸವಾಗಲಿ ಎಂದು ಹಿರಿಯ ಸಾಹಿತಿ ಡಾ ಮಹಾಂತೇಶ ಮಲ್ಲನಗೌಡರ ಹೇಳಿದರು.
ಅವರು ಇಂದು ಕೊಪ್ಪಳ ಕಸಾಪದಿಂದ ಆಯೋಜಿಸಿದ್ದ ರಾಜಶೇಖರ ಅಂಗಡಿಯವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ ಆರಂಭದಿಂದಲೂ ಕನ್ನಡ ಮನಸ್ಸುಗಳನ್ನು ಕೂಡಿಸಿಕೊಂಡು ಕಸಾಪಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದ. ಅವರು ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವ ಶಕ್ತಿ ರಾಜಶೇಖರನಲ್ಲಿತ್ತು ಎಂದು ಹೇಳಿದರು.
ಪತ್ರಕರ್ತ ಶರಣಪ್ಪ ಬಾಚಲಾಪುರ ಜಿಲ್ಲೆಯಲ್ಲಿ ಕಸಾಪ ಬೆಳೆಸಲು. ಸಾಂಸ್ಕೃತಿಕವಾಗಿರುವವರನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಸ್ನೇಹಪರ ಕೆಲಸ ಮಾಡುವ ರಾಜಶೇಖರ ಆತ್ಮೀಯವಾಗಿ ಒಂದು ತಂಡವನ್ನು ರಚಿಸಿಕೊಂಡಿದ್ದ ಎಂದರು.
ರಂಗಕರ್ಮಿ ತೋಟಪ್ಪ ಕಾಮನೂರ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿದ್ದವರನ್ನು ಸಹ ಕಸಾಪಕ್ಕೆ ತಂದು ರಂಗ ಸೇವೆ ಮಾಡುವವರು ಗುರುತಿಸುವ ಕೆಲಸ ಮಾಡಿದ ಎಂದರು.
ಉಪನ್ಯಾಸಕ ಶರಣಬಸಪ್ಪ ಬಿಳಿಯೆಲೆ ಮಾತನಾಡಿ ರಾಜಶೇಖರ ಸಾಹಿತಿಯಾಗಿರಲಿಕ್ಕಿಲ್ಲ ಆದರೆ ಸಂಘಟನೆಯಲ್ಲಿ ಅವರ ಮೀರಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ನೀಲಕಂಠಯ್ಯ ಹಿರೇಮಠ. ಮಹೇಶ ಬಳ್ಳಾರಿ .ಸಿದ್ದಲಿಂಗಪ್ಪ ಕೋಟ್ನೇಕಲ್ ಮಾತನಾಡಿದರು.
ರಮೇಶ ತುಪ್ಪದ ಸ್ವಾಗತಿಸಿದರು. ರಾಮಚಂದ್ರಗೌಡ ಗೊಂಡಬಾಳ ಪ್ರಸ್ತಾವಿಕವಾಗಿ ಮಾತನಾಡಿದರು.
ಚನ್ನಪ್ಪ ಕಡ್ಡಿಪುಡಿ, ಶರಣು ಡೊಳ್ಳಿನ, ಈಶಪ್ಪ ದಿನ್ನೇರ. ವೀರೇಶ ಕರಮುಡಿ,ಮೌನೇಶ ಬಡಿಗೇರ, ಹುಲಿಗೆಪ್ಪ ಕಟ್ಟಿಮನಿ, ಶರಣಗೌಡ ಉಗ್ಗಳಗೌಡರ. ಸಂತೋಷ ದೇಶಪಾಂಡೆ, ನಾಭಿರಾಜ ದಸ್ತೇನವರ, ದೊಡ್ಡೇಶ ಎಲಿಗಾರ, ಗೀರೀಶ ಪಾನಗಂಟಿ, ಶೇಖರಗೌಡ, ನಾಗರಾಜ ಡೊಳ್ಳಿನ, ಬಸವರಾಜ ಕೊಮಲಾಪುರ , ಶಿವಕುಮಾರ ಕುಕನೂರು ಇದ್ದರು.