WhatsApp Image 2024-04-01 at 6.39.36 PM

ವಿರೋಧ ಪಕ್ಷದ ಅಭ್ಯರ್ಥಿ ಯಾರಾದರೂ ನಮಗೆ ಲೆಕ್ಕಿಕ್ಕಿಲ್ಲ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ : ಸಚಿವ ಬಿ.ನಾಗೇಂದ್ರ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಚುನಾವಣೆ ಎಂದರೆ, ತಂತ್ರ ಕುತಂತ್ರಗಳು ಇದ್ದೇ ಇರುತ್ತವೆ, ನಾವು ಯಾರ ವಿರುದ್ಧವು ಕುತಂತ್ರವನ್ನು ಮಾಡುವುದಿಲ್ಲ, ನಮ್ಮ ಚುನಾವಣಾ ತಂತ್ರವನ್ನೇ ಬಿ.ಜೆ.ಪಿ ಯವರು ಕುತಂತ್ರ ಎಂದುಕೊಂಡಿದ್ದಾರೆ, ವಿರೋಧ ಪಕ್ಷದ ಅಭ್ಯರ್ಥಿ ಯಾರಾದರೂ ನಮಗೆ ಲೆಕ್ಕಿಕ್ಕಿಲ್ಲ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಧೀಕೃತ ಅಭ್ಯರ್ಥಿಯಾದ ಇ ತುಕಾರಾಮ್ ರವರನ್ನು ಗೆಲ್ಲಿಸುವುದು ನಮ್ಮ ಗುರಿ ಎಂದು ಸಚಿವ ಬಿ ನಾಗೇಂದ್ರ ತಿಳಿಸಿದರು.
ಅವರು ಇಂದು ನಗರದ ನಕ್ಷತ್ರಾ ಹೊಟೆಲ್ ನಲ್ಲಿ ಚುನಾವಣಾ ಪೂರ್ವ ಪ್ರಚಾರದ ನಿಮಿತ್ತ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಕೆ.ಪಿ.ಸಿ.ಸಿ ಮತ್ತು ಎ.ಐ.ಸಿ.ಸಿ ಯ ನಾಯಕರು ಅಳೆದು ತೂಗಿ ಸಂಡೂರು ಶಾಸಕ ಮಾಜಿ ಸಚಿವ ಇ ತುಕಾರಾಮ್ ನಂತ ಸಮರ್ಥ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದ್ದಾರೆ, ಇವರನ್ನು ಅವಳಿ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ಅವರನ್ನು ಗೆಲ್ಲಿಸಿ ಕೆ.ಪಿ.ಸಿ.ಸಿ ಮತ್ತು ಎ.ಐ.ಸಿ.ಸಿ ನಾಯಕರುಗಳಿಗೆ ಉಡುಗೋರೆಯನ್ನು ನೀಡುತ್ತೇವೆ, ಈ ಲೋಕಾಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲಲು ಶ್ರಮವಹಿಸಲಾಗುವುದು, ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ಕಾರದ ಐದು ಗ್ಯಾರಂಟಿಗಳ ಸಹಾದಿಂದ ಮತ್ತು ಪಕ್ಷದ ಆಂತರಿಕ ಸಮೀಕ್ಷೆಯಿಂದ ಅದರಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಂತೂ  ಗ್ಯಾರಂಟಿಯಾಗಿ ಗೆಲ್ಲುತ್ತೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ತುಕಾರಾಮ್ ಉನ್ನತ ಶಿಕ್ಷಣ ಪಡೆದಂತ ಸಂಭಾವಿತ ವ್ಯಕ್ತಿಯಾಗಿದ್ದು ಶಾಸಕ ಮತ್ತು ಸಚಿವರಾಗಿ ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡಿ ಶುದ್ಧ ಹಸ್ತರಾಗಿದ್ದಾರೆ ಪಕ್ಷದ ಸಚಿವರು, ರಾಜ್ಯಸಭಾ ಸದಸ್ಯರು, ಶಾಸಕರು ಮತ್ತು ತಳಮಟ್ಟದ ಕಾರ್ಯಕರ್ತರು ಕೆಲಸ ಮಾಡಿ ತುಕಾರಾಮ್ ರವರನ್ನು ಗೆಲ್ಲಿಸುತ್ತೇವೆ, ನಮ್ಮ ತಂತ್ರವನ್ನೇ ಕುತಂತ್ರ ಎಂದುಕೊಂಡ ಬಿ.ಜೆ.ಪಿ ಅಭ್ಯರ್ಥಿ ಸೋಲುತ್ತಾರೆಂದರು, ಐದು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಗೆ ಮುಂದಿನ ವರ್ಷದ ಬಜೆಟ್ ನಲ್ಲಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ, ಖಂಡಿತವಾಗಿ ಮುಂಬರುವ ದಿನಗಳಲ್ಲಿ ಅದನ್ನು ಜಾರಿಗೊಳಿಸುತ್ತೇವೆಂದು ಭರವಸೆ ನೀಡಿದರು.
ಕಂಪ್ಲಿ ಶಾಸಕ ಗಣೇಶ್ ಮಾತನಾಡಿ, ಬಿ.ಜೆ.ಪಿ ಯವರು ಒಂದು ಸುಳ್ಳನ್ನೆ ಪದೇ ಪದೇ ಹೇಳಿ ಅದನ್ನೇ ಸತ್ಯ ಮಾಡುತ್ತಾರೆ, ಅವರಿಗೆ ನಟನೆ ಮಾಡುವುದು ಚೆನ್ನಾಗಿ ಗೊತ್ತಿದೆ, ಆ ಪಕ್ಷದಲ್ಲಿ ಬರಿ ನಾಟಕಕಾರರೇ (ಆಕ್ಟರ್) ಇದ್ದಾರೆ, ನಮ್ಮಲ್ಲಿ ಕೆಲಸ ಮಾಡುವ ವರ್ಕರ್ ಗಳಿದ್ದಾರೆ ಅವರಿಂದ ನಾವು ಗೆಲ್ಲುವುದು ಖಚಿತ, ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಾರೆಯೇ ಹೊರತು ಇವರಿಗೆ ವಯಕ್ತಿವಾದ ಯಾವುದೇ ಅರ್ಹತೆ ಮತ್ತು ಗೆಲ್ಲುವ ತಾಕತ್ತು ಇಲ್ಲ, ಈಗಾಗಲೇ ತುಕಾರಾಮ್ ಶಾಸಕರಾಗಿದ್ದಾರೆ, ನನಗೆ ಯಾವುದೇ ಅಧಿಕಾರವಿಲ್ಲ ಸೋತರು ಗೆದ್ದರು ಅವರಿಗೆ ಅಧಿಕಾಯಿರುತ್ತದೆ ನನ್ನನ್ನು ಗೆಲ್ಲಿಸಿ ಅಧಿಕಾರ ನೀಡಿ ಎಂದು ಅನುಕಂಪದಿಂದ ಮತಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ, ಈ ಚುನಾವಣೆಯಲ್ಲಿ ಇದಾವುದು ಲೆಕ್ಕಕ್ಕೆ ಬರುವುದಿಲ್ಲ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲು ಸಜ್ಜಾಗಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಇ ತುಕಾರಾಮ್ ಮಾತನಾಡಿ, ನಾನು ಖುಷಿಯಿಂದಲೇ ಚುನಾವಣಾ ಕಣದಲ್ಲಿದ್ದೇನೆ ನನಗೆ ಯಾರ ಒತ್ತಡವು ಇಲ್ಲ, ಐದಾರು ಆಕಾಂಕ್ಷಿಗಳಿದ್ದರೂ ಅದರಲ್ಲಿ ನಾನು ಒಬ್ಬನಾಗಿದ್ದೆ, ಹೈಕಮಾಂಡ್ ಮತ್ತು ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡಿದ್ದಾರೆ, ಅವರ ನಂಬಿಕೆಯನ್ನು ಹುಸಿಯಾಗುವುದಿಲ್ಲ, ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಜಾರಿಗೊಳಿಸಿರುವ ಯೋಜನೆಗಳು ಇಂದು ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಕೂಲವಾಗಲಿದೆ, ಪ್ರಜಾ ಪ್ರಭುತ್ವ ಮತ್ತು ಸಂವಿಧಾನ ಉಳುವಿಗಾಗಿ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತದೆ.
ಈ ಸಂದರ್ಭದಲ್ಲಿ ನಗರ ಶಾಸಕ ಭರತ್ ರೆಡ್ಡಿ, ಮಾಜಿ ಎಂ.ಎಲ್.ಸಿ ಕೆ.ಎಸ್.ಎಲ್ ಸ್ವಾಮಿ, ಬುಡ ಅಧ್ಯಕ್ಷ ಜೆ.ಎಸ್ ಆಂಜಿನೆಯಲು, ಬಾಬು ಜಗಜೀವನರಾಮ್ ಚರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿ.ಸಿ.ಸಿ ಬಳ್ಳಾರಿ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್, ವಿಜಯನಗರ ಜಿಲ್ಲಾಧ್ಯಕ್ಷ ಶಿವಯೋಗಿ, ಮೇಯರ್ ಶ್ವೇತಾ, ಉಪ ಮೇಯರ್ ಜಾನಕಮ್ಮ, ಅಲ್ಲಂ ಪ್ರಶಾಂತ್, ಬಿ ರಾಮ್ ಪ್ರಸಾದ್, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಎ ಮಾನಯ್ಯ, ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!