ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ವಿಜಯನಗರ ಜಿಲ್ಲೆಗೆ ಎರಡು ಕರ್ನಾಟಕ ಬಲಿಷ್ಠ ಟ್ರೋಫಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 2- ರಾಜ್ಯ ಸಬ್ ಜೂನಿಯರ್ ಜೂನಿಯರ್ ಮತ್ತು ಮಾಸ್ಟರ್ಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ್ನು ಬೆಂಗಳೂರಿನ ನೆಲಮಂಗಲದ ಪವರ್ ಸ್ಟಾರ್ ಫಿಟ್ನೆಸ್ ವತಿಯಿಂದ ಇದೇ ಫೆಬ್ರುವರಿ29 ರಿಂದ 31 ರವರೆಗೆ ಮಂಗಳೂರು ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಅಡಿಯಲ್ಲಿ, ನೆಲಮಂಗಲ ದಲ್ಲಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಹೊಸಪೇಟೆ ವಿಜಯನಗರ ಜಿಲ್ಲೆಯ ವಿಕ್ಟರಿ ಜಿಮ್ ನ ಐದು ಜನ ಕ್ರೀಡಾಪಟುಗಳು ಭಾಗವಹಿಸಿದ್ದರು.
ಇದರಲ್ಲಿ ವಲಿಬಾಷ M1 83. ಕೆಜಿ, ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಸ್ಕ್ವಾಟ್ ,ಬೆಂಚ್ ,ಡೆಡ್ ಲಿಫ್ಟ್ ಒಟ್ಟು 630 ಕೆಜಿ ಅತಿ ಹೆಚ್ಚು ಭಾರ ಎತ್ತುವುದರ ಮೂಲಕ ಕರ್ನಾಟಕ ಬಲಿಷ್ಠ ವ್ಯಕ್ತಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ 76.ಕೆಜಿ M1 ವಿಭಾಗದಲ್ಲಿ ವಿಜಯವಾಣಿ ಪ್ರಥಮ ಸ್ಥಾನ ಹಾಗೂ ಸ್ಕ್ವಾಟ್, ಬೆಂಚ್, ಡೆಡ್ ಲಿಫ್ಟ್ ಸೇರಿ ಒಟ್ಟು 405. ಕೆಜಿ ಅತಿ ಹೆಚ್ಚು ಭಾರ ಎತ್ತುವುದರ ಮೂಲಕ ಕರ್ನಾಟಕ ಬಲಿಷ್ಠ ಮಹಿಳೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಕೆ 74 ಕೆಜಿ M1ವಿಭಾಗದಲ್ಲಿ ಒಟ್ಟು 340 ಕೆಜಿ ಭಾರ ಎತ್ತುವುದರ ಮೂಲಕ ದ್ವಿತೀಯ ಸ್ಥಾನವನ್ನು ಪಡೆದರು.
ಸಬ್ ಜೂನಿಯರ್ 66 ಕೆಜಿ ವಿಭಾಗದಲ್ಲಿ 320 ಕೇಜಿ ಭಾರಾ ಎತ್ತುವುದರ ಮೂಲಕ ಅಬ್ದುಲ್ಲ ತೃತೀಯ ಸ್ಥಾನವನ್ನು ಪಡೆದರು.
ಮಹಿಳಾ ಸಬ್ ಜೂನಿಯರ್ 57 ಕೆಜಿ ವಿಭಾಗದಲ್ಲಿ 125 ಕೇಜಿ ಭಾರ ಎತ್ತುವುದರ ಮೂಲಕ ” ಜನನಿ ” ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರ ಈ ಸಾಧನೆ ವಿಜಯನಗರ ಜಿಲ್ಲೆಗೆ ಅಪಾರ ಕೀರ್ತಿಯನ್ನು ತಂದಿರುತ್ತದೆ . ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಗೆ ಪುರುಷ ಹಾಗೂ ಮಹಿಳಾ ಎರಡು ಬಲಿಷ್ಠ ಟ್ರೋಫಿ ಪಡೆದಿರುವುದು ವಿಶೇಷ.. ಇದೇ ರೀತಿ ಇವರ ಸಾಧನೆಯು ಮುಂದುವರೆಯಲಿ ಅನೇಕ ಕ್ರೀಡಾಪಟುಗಳು ನಮ್ಮ ಜಿಲ್ಲೆಯಿಂದ ಬಾಗವಹಿಸಿ ಜಿಲ್ಲೆಗೆ ಇದೇ ತರಹ ಕೀರ್ತಿಯನ್ನು ತರಲಿ. ಹಾಗೂ ಮುಂಬರುವ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಕರ್ನಾಟಕಕ್ಕೆ ಹಾಗೂ ವಿಜಯನಗರ ಜಿಲ್ಲೆಗೆ ಕೀರ್ತಿಯನ್ನು ತರಲಿ ಎಂದು ಅಂತರಾಷ್ಟ್ರೀಯ ತರಬೇತುದಾರರಾದ ಕೆ ಕುಮಾರ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ದುಗ್ಗೇಶ್ ಕಾಂತರಾಜ್ ರವರು ಹಾಗೂ ನಗರದ ಕ್ರೀಡಾಭಿಮಾನಿಗಳು ಕ್ರೀಡಾ ಪ್ರೋತ್ಸಾಹಕರು ಶುಭ ಕೋರಿದ್ದಾರೆ.
