IMG_20240403_065305

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; module: photo; hw-remosaic: false; touch: (-1.0, -1.0); sceneMode: 8; cct_value: 5230; AI_Scene: (-1, -1); aec_lux: 168.51334; aec_lux_index: 0; albedo: ; confidence: ; motionLevel: -1; weatherinfo: null; temperature: 41;

ಶಿವಶಾಂತವೀರ ಪುಣ್ಯಸ್ಮರಣೆ: ಗವಿಶ್ರೀ ನೇತ್ರತ್ವದಲ್ಲಿ ಪಾದಯಾತ್ರೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ನಗರದ ಗವಿಸಿದ್ದೇಶ್ವರ ಮಠದ 17ನೇ ಪೀಠಾಧಿಪತಿಯಾಗಿದ್ದ ಶಿವಶಾಂತವೀರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ನಿಮಿತ್ಯ ಸಾವಿರಾರು ಭಕ್ತರು ಗವಿಮಠದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಜರುಗಿತು.
ಬುಧವಾರ ಬೆಳಿಗ್ಗೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರನಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಮಾಡಿದರು.

ಪಾದಯಾತ್ರೆಯಲ್ಲಿ ಬಿಸಿಲಿನ ಕಾವು ಏರಿದ ಕಾರಣ ಭಕ್ತರೇ ಸ್ವಯಂಪ್ರೇರಿತರಾಗಿ ಮಾರ್ಗದುದ್ದಕ್ಕೂ ಕುಡಿಯುವ ನೀರು, ಚಾಕೊಲೆಟ್, ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಕೊಪ್ಪಳ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬೆಳಗಿನ ಜಾವದಿಂದಲೆ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಪುನಿತರಾದರು.
ಸುಮಾರು ಎರಡುತಾಸುಗಳ ಜರುಗಿದ ಪಾದಯಾತ್ರೆ ಬೆಳಿಗ್ಗೆ 7ಕ್ಕೆ ಪ್ರಾರಂಭವಾಗಿ 9:30ಕ್ಕೆ ಸಂಪನ್ನಗೋಂಡಿತು.

 

Leave a Reply

Your email address will not be published. Required fields are marked *

error: Content is protected !!