
ಕಾಂಗ್ರೇಸ್ ತೋರೆದು ಅಲ್ಪಸಂಖಾತ್ಯರು ಬಿಜೆಪಿ ಸೆರ್ಪಡೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 7- ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಟ್ರು ನರಸಾಪುರ ಗ್ರಾಮದ ಎಂಟು ಜನ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಚೆನ್ನಪ್ಪ ಮಳಗಿ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಅಭಿವೃದ್ದಿಗಾಗಿ ಮತ್ತೋಮ್ಮೆ ದೇಶದ ಪ್ರಧಾನಮಂತ್ರಿಯನ್ನಾಗಿ ನರೆಂದ್ರ ಮೋದಿಒಯವರನ್ನು ಮಾಡಲು ಅನೇಕರು ಕಾಂಗ್ರೇಸ ಪಕ್ಷವನ್ನು ತೋರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ಅಲ್ಪಸಂಖ್ಯಾತರು ಅಭಿವೃದ್ದಿಗಾಗಿ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಕಾಸಿಂಸಾಬ್, ಹುಸೇನ್ ಸಾಬ್, ಶಮಿದ್, ಸದ್ದಾಂ, ಖಾಜಾ ಸಾಬ್, ಮಹಮದ್ ಗೌಸ್, ಶಮೀರ್ ಮುಂತಾದವರು ಕಾಂಗ್ರೇಸ ಪಕ್ಷವನ್ನು ತೋರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.