
ಕೂರಿಗನೂರು ಹುಲಿಗೆಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ರೂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ತಾಲೂಕಿನ ಕೂರಿಗನೂರು ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ರೂಪಾಯಿ ಮೊತ್ತದ ಬ್ಯಾಂಕ್ ಡಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಳ್ಳಾರಿ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ವಿತರಿಸಿ ಮಾತನಾಡುತ್ತಾ ಧಾರ್ಮಿಕ ವಿಧಿ ವಿಧಾನಗಳನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ರೂಢಿ ಮಾಡಿದರೆ ಮುಂದಿನ ದಿನಗಳಲ್ಲಿ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ವಲಯ ಮೇಲ್ವಿಚಾರಕ ಪ್ರಭಯ್ಯ ಅಂಗಡಿ, ಹುಲಿಗೆಮ್ಮ ದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಕೆ ಶೇಖಣ್ಣ, ಉಪಾಧ್ಯಕ್ಷ ಗಂಗಾಧರ, ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ಆನಂದಯ್ಯ ಸ್ವಾಮಿ, ತಿಪ್ಪಯ್ಯ, ಶ್ರೀನಿವಾಸ, ಲಕ್ಷ್ಮಿಕಾಂತ ರೆಡ್ಡಿ, ಸೇವಾ ಪ್ರತಿನಿಧಿಗಳಾದ ರಾಜೇಶ್ವರಿ ಮತ್ತು ಲಕ್ಷ್ಮಿ ಇದ್ದರು.