WhatsApp Image 2024-04-12 at 6.09.18 PM

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸತ್ಯ : ಶ್ರೀರಾಮುಲು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 12- ಜಗತ್ತಿನಲ್ಲಿ ಸೂರ್ಯ ಚಂದ್ರರು ಇರೋದು ಎಷ್ಟು ಸತ್ಯವೋ, ನರೇಂದ್ರ ಮೋದಿ ಈ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು, ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಹೇಳಿದರು.

ಬಳ್ಳಾರಿ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ದೇಶಕ್ಕೆ ನರೇಂದ್ರ ಮೋದಿ ಕೊಟ್ಟ ಉತ್ತಮ ಆಡಳಿತ, ಅವರನ್ನು ಮತ್ತೊಮ್ಮೆ ಜನತೆ ಮತ ನೀಡಿ ಪ್ರಧಾನಿಯಾಗಿ ಆಯ್ಕೆ ಮಾಡುವದು ಅಷ್ಟೇ ಖಚಿತ ಎಂದು ಸ್ಪಷ್ಟನೆ ಮಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲನ್ನು ಕಂಡೆ, ಅದು ಕೇವಲ ಕಾಂಗ್ರೆಸ್ ಕೊಟ್ಟ ಸುಳ್ಳ ಭರವಸೆಗಳಿಂದ ಜನರು ಮೋಸ ಹೋಗಿದ್ದರು. ಈಗ ಜನರಿಗೆ ಎಲ್ಲಾ ಗೊತ್ತಾಗಿದೆ ಈ ಚುನಾವಣೆಯಲ್ಲಿ ನನ್ನನ್ನು ಅತಿಹೆಚ್ಚಿನ ಮೆಜಾರಿಟಿಯಿಂದ ಗೆಲ್ಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತ ಮಾಡಿದರು.

ಹಿಂದೆಯಂತೆ ಚುನಾವಣೆಯ ಬಳಿಕ ಸಂಪೂರ್ಣ ನೆಲಕ ಚೆಲ್ಲಿದೆ, ಬಹುತೇಕ ನಾಯಕರು ಇಂಡಿಯಾ ಒಕ್ಕೂಟದಿಂದ ಹೊರ ಬರುತ್ತಾರೆ. ರಾಹುಲ್ ಗಾಂಧಿ ಒಬ್ಬಂಟಿಯಾಗುತ್ತಾರೆ ಕಾಂಗ್ರೆಸ್ ನಲ್ಲಿ ಅಧರ್ಮ ಇರೋ ಕಾರಣ ಪಕ್ಷ ಬಿಡುತ್ತಿದ್ದಾರೆ ಕಾಂಗ್ರೆಸ್ ಪರಿಸ್ಥಿತಿ ಅಯ್ಯೋ ಮಯವಾಗಿದೆ, ದೇಶವನ್ನು ಅರವತ್ತು ವರ್ಷ ಆಳಿದ್ದ ಜನರಿಗೆ ಒಳ್ಳೆಯ ಮಾಡದ ಕಾರಣ ಜನರು ಅವರನ್ನು ತಿರಸ್ಕಾರ ಮಾಡ್ತಾರೆ ಎಂದರು. ಬಿಜೆಪಿ ಪಕ್ಷಕ್ಕೆ ಮಾಜಿ ಸಚಿವ ಗಾಂಧಿ ಜನಾರ್ಧನ್ ರೆಡ್ಡಿ ಮರಳಿ ಬಂದಿರುವುದರಿಂದ ಪಕ್ಷಕ್ಕೆ ಮತ್ತಿಷ್ಟು ಬಲ ಖಚಿತ. ಸುಲಭವಾಗಿ ನನ್ನ ಗೆಲವು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ, ವಿಜಯನಗರ ಮಾಜಿ ಶಾಸಕ ಆನಂದ್ ಸಿಂಗ್, ಶಾಸಕ ನೇಮರಾಜ್ ನಾಯಕ,, ಕೃಷ್ಣ ನಾಯಕ್, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಗಾಲಿ ಲಕ್ಷ್ಮಿ ಅರುಣ, ರೈತರು ಮೋರ್ಚಾ ಮುಖಂಡ ಗುರುಲಿಂಗನಗೌಡ, ಅಮ್ಮಾಜಿ ಕಾರ್ಪೊರೇಟರ್ ಕೆ ಎಸ್ ದಿವಾಕರ್, ಗೋವಿಂದರಾಜು, ಗಳ ಜೊತೆಗೆ ಹಲವಾರು ಮಂದಿ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!